ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಡಾ.ಶಿವರುದ್ರಪ್ಪ ಕನ್ನಡ ನಾಡು ಕಂಡ ಮಹಾಚೇತನ

Rashmi Kasaragodu
Updated On : 30 Dec 2013, 2:40 am

ಪಾವಗಡ: ರಾಷ್ಟ ಕವಿ ಡಾ.ಶಿವರುದ್ರಪ್ಪ ಕನ್ನಡ ನಾಡು ಕಂಡ ಮಹಾಚೇತನರೆಂದು ಜಾನಪದ ಕಲಾವಿದ ರಂಗಸಮುದ್ರ ನೆಲಸಿರಿ ಜಯರಾಮ್ ತಿಳಿಸಿದರು.  ಡಾ.ಶಿವರುದ್ರಪ್ಪ ನಿಧನರಾದ ಹಿನ್ನಲೆಯಲ್ಲಿ ತಾಲೂಕು ದ.ರಾ ಬೇಂದ್ರೆ ಕನ್ನಡ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ  ರಂಗಸಮುದ್ರ ಸ.ಹಿ.ಪ್ರಾ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಭಾವ ಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ  ಅವರು ಮಾತನಾಡಿದರು.
ಸಾಹಿತ್ಯದ ಮೂಲಕ ಮಾನವತಾ ಗುಣಗಳನ್ನು ತೋರಿಸಿಕೊಟ್ಟ ಡಾ.ಶಿವರುದ್ರಪ್ಪ ಅವರೊಬ್ಬ ಅದ್ಭುತ ಕವಿ, ಅವರ ಜೀವತ ಅವಧಿಯಲ್ಲಿ ಯಾರಿಗೂ ನೋವು ಉಂಟು ಮಾಡದೇ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಿದವರು. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಕಸಾಪ ಮಾಜಿ ಅಧ್ಯಕ್ಷ ಹಾಗೂ ಜಾನಪದ ಸಂಶೋಧಕ,ಪ್ರಾಂಶುಪಾಲ ಸಣ್ಣನಾಗಪ್ಪ ಅವರು ಮಾತನಾಡಿ  ಡಾ. ಶಿವರುದ್ರಪ್ಪ ನನ್ನ ಗುರುಗಳಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ವ್ಯಾಸಂಗ ಮಾಡುವ ಸಂದರ್ಭದಲ್ಲಿ ನಾನು ಅವರ ನೆಚ್ಚಿನ ಶಿಷ್ಯನಾಗಿದ್ದೆ. ನನ್ನ ಬಣ್ಣ ಕಪ್ಪುಗಿರುವ ಕಾರಣ ಅವರು ಕಾಲೇಜಿನಲ್ಲಿ ನನ್ನನ್ನು ಕೃಷ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ತಿಳಿಸಿದರು.
ಮೂಢ ನಂಬಿಕೆ ಕಂದಾಚಾರದಿಂದ ದೂರವಿದ್ದ ಕವಿ ಶಿವರುದ್ರಪ್ಪ ಸಂಪ್ರದಾಯ ಆಚಾರ ವಿಚಾರಗಳನ್ನು ತಿರಸ್ಕರಿಸಿದವರು ಎಂದು ಸಂಘಸಂಸ್ಥೆಗಳ ಪ್ರತಿನಿಧಿ ಆರ್.ಟಿ. ಖಾನ್ ಹೇಳಿದರು.
ಸಭೆಯಲ್ಲಿ ದಲಿತ ವಿಮೋಚನೆ ಸೇನೆ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನೇಯ ಶಾಲೆ ಮುಖ್ಯ ಶಿಕ್ಷಕ ದೊಡ್ಡಲಿಂಗಯ್ಯ ಮುಂತಾದವರು ರಾಷ್ಟಕವಿ ಶಿವರುದ್ರಪ್ಪ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸೇರಿದಂತೆ ಅನೇಕ ವಿಚಾರಧಾರೆಗಳ ಬಗ್ಗೆ ಮಾತನಾಡಿದರು. ಪತ್ರಕರ್ತ ಜೆ.ನಾಗೇಂದ್ರ, ಚನ್ನಸಾಗರ ಮಲ್ಲೇಶ್, ಸಾಕ್ಷರ್ ಭಾರತ್ ಸರ್ಕಾರೇತರ ಸಂಯೋಜಕ ಶ್ರೀನಿವಾಸ್ ಸೇರಿದಂತೆ ಅನೇಕ ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಸಾಹಿತಿ ಆರ್.ಎಂ. ದೇವರಾಜ್ ಕಾರ್ಯಕ್ರಮ ನೆರೆವೇರಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement