ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪರಮಶಿವಯ್ಯ ವರದಿ ಅಪ್ರಸ್ತುತ

Rashmi Kasaragodu
Updated On : 30 Dec 2013, 2:37 am

ತುಮಕೂರು: ತುಮಕೂರು ಜಿಲ್ಲೆ ಸೇರಿದಂತೆ 9 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ವಾಟರ್ಗ್ರಿಡ್ ಅಥವಾ ಪರಮಶಿವಯ್ಯ ವರದಿ ಇಂದಿಗೆ ಅಪ್ರಸ್ತುತ, ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬುದನ್ನು ಪರಮಶಿವಯ್ಯನವರೇ ಒಪ್ಪಿಕೊಂಡಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಯಾವುದೇ ಯೋಜನೆ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಕಸ್ತೂರಿ ರಂಗನ್ ವರದಿ ಕೂಡ ವ್ಯತಿರಿಕ್ತವಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುವುದಷ್ಟೇ ಅಲ್ಲ. ಯೋಜನೆ ಕಾರ್ಯಸಾಧುವಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಈ ಹಿಂದಿನ ಚರ್ಚೆ, ಸರ್ವೆ, ಬಿಡುಗಡೆಯಾಗಿರುವ ಹಣ ಎಲ್ಲವೂ ಈಗ ಲೆಕ್ಕಕ್ಕಿಲ್ಲದಂತಾಗಿದೆ. ಯೋಜನೆಯಿಂದ 1600 ಎಕರೆ ಅರಣ್ಯ ಹಾಳಾಗಲಿದೆ. ವಾಟರ್ಗ್ರಿಡ್, ಗಾರ್ಲೆಂಡ್ ಕೆನಾಲ್ ಜಾರಿಗೆ ಆ ಭಾಗದ ಮಣ್ಣೇ ವಿರುದ್ಧವಾಗಿದೆ. ಯೋಜನೆ ಜಾರಿಯಾದರೆ ಹರಿದ್ವಾರ, ಕೇದಾರನಾಥದಲ್ಲಿ ಭೂ ಕುಸಿತವುಂಟಾದಂತೆ ಇಲ್ಲೂ ಆಗಬಹುದು. ಹೀಗಾಗಿ ಪರಮಶಿವಯ್ಯ ವರದಿ ಜಾರಿ ಅಸಾಧ್ಯ. ಅಷ್ಟೇ ಅಲ್ಲ ಅಪ್ರಸ್ತುತ ಕೂಡ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಯ್ಬಿಡದ ಸಂತೋಷ್


ತುಮಕೂರು: ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತಮ್ಮ ಪುತ್ರ ಸಂತೋಷ್ ಜಯಚಂದ್ರ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದು ಗಮನಾರ್ಹ. ಆದರೆ ಪುತ್ರ ಸಂತೋಷ್ ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಅಪ್ಪಿತಪ್ಪಿಯೂ ಬಾಯ್ಬಿಡಲಿಲ್ಲ. ಮಾತೇ ಬಾರದವರಂತೆ ಸುದ್ದಿಗೋಷ್ಠಿಯಲ್ಲಿ ಪವಡಿಸಿದ್ದರು. ಸುದ್ದಿಗೋಷ್ಠಿಗೂ ಮುನ್ನ ಜಯಚಂದ್ರ ತಮ್ಮ ಪುತ್ರನನ್ನು ಕರೆದು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು.


ಕುಡಿಯುವ ನೀರಿನ ಕೊರತೆಯಾಗಲಿದೆ

ತುಮಕೂರು: ಈ ಬಾರಿ ತುಮಕೂರು ಜಿಲ್ಲೆ ಕುಡಿಯುವ ನೀರಿನ ಕೊರತೆ ಎದುರಿಸುವುದು ಖಚಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಜಿಲ್ಲೆಗೆ 25 ಟಿಎಂಸಿ ಹೇಮಾವತಿ ನೀರು ನಿಗದಿಯಾಗಿದೆ. ಆದರೆ ನಾಲೆ ಒಡೆದ ಪರಿಣಾಮ ನೀರು ಲಭ್ಯವಾಗಿಲ್ಲ. ಜಿಲ್ಲೆಯ ಕೆರೆಗಳು ಖಾಲಿಯಾಗಿವೆ.  10 ತಾಲೂಕುಗಳಲ್ಲಿ 9 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಇನ್ನೊಂದು ತಾಲೂಕು ಘೋಷಣೆಯಾಗುವ ಸಂಭವವಿದೆ. ಮಳೆ ಕಣ್ಣಾ ಮುಚ್ಚಾಲೆಯಾಡಿದೆ. ಮಳೆಯಿಲ್ಲ. ಬೆಳೆಯಿಲ್ಲ. ಬೆಲೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವರು ವಿಷಾದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement