ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಇಂದು ಉದ್ಘಾಟನೆ

Rashmi Kasaragodu
Updated On : 30 Dec 2013, 2:37 am

ಮಧುಗಿರಿ: ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರು ಕಾಳಜಿ ವಹಿಸಿದ ಪರಿಣಾಮ ಈ ಭಾಗದ ಜನರ ಬಹು ದಿನಗಳ
ಬೇಡಿಕೆಯಂತೆ  ಮಧುಗಿರಿ ಉಪ ವಿಭಾಗ ಕೇಂದ್ರಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ (ಎಆರ್ಟಿಓ) ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಬ್ಯಾಂಕಿನ ಸುಸಜ್ಜಿತ ಕಟ್ಟಡದಲ್ಲಿ ಡಿ.30 ರ ಸೋಮವಾರ ಪ್ರಾರಂಭವಾಗಲಿದ್ದು ಇದರಿಂದ ಸಾರ್ವಜನಿಕರ ದಶಕಗಳ ಕನಸು ನನಸಾಗಲಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು  ಶಾಸಕ ಕೆ.ಎನ್.ರಾಜಣ್ಣ ಖುದ್ದು ಭೇಟಿ ಮಾಡಿ ಮಧುಗಿರಿ ಉಪ ವಿಭಾಗ ಕೇಂದ್ರಕ್ಕೆ ಎಆರ್ಟಿಓ ಕಚೇರಿ ಅಗತ್ಯದ ಬಗ್ಗೆ  ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ರಾಜ್ಯ ಬಜೆಟ್ಲ್ಲಿ ಈ ಕಚೇರಿ ಪ್ರಾರಂಭಕ್ಕೆ ಸರ್ಕಾರ ಅನುಮತಿ ನಿಟ್ದೆ.  ಡಿ.30ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಈ  ನೂತನ ಕಚೇರಿಯನ್ನು ಶಾಸಕ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement