ಹುಳಿಯಾರು ಅಯ್ಯಪ್ಪಸ್ವಾಮಿ ವಿಶೇಷ ಪಡಿಪೂಜೆ
ಹುಳಿಯಾರು: ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನೂರಾರು ಮಾಲಾಧಾರಿ ಸ್ವಾಮಿಗಳ ಹಾಗೂ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪನ ನಾಮಸ್ಮರಣೆ, ಭಜನೆಯೊಂದಿಗೆ ಶ್ರೀ ದೇವರ ಶ್ರೇಷ್ಠ ಸೇವೆಯಾದ ಪವಿತ್ರ 18 ಮೆಟ್ಟಲುಗಳಿಗೆ ಪೂಜೆ ಮಾಡುವ ಮೂಲಕ ಪಡಿಪೂಜಾ ಕಾರ್ಯಕ್ರಮ ನೆರವೇರಿತು.
ಮಾಲಾಧಾರಿ ಸ್ವಾಮಿಗಳು ಬೆಳಗ್ಗಿನಿಂದಲೇ ಸನ್ನಿಧಿಯನ್ನು ಶುಚಿಗೊಳಿಸಿ, ಹೂ, ಹಾರ, ತಳಿರು ತೋರಣಗಳಿಂದ ಹಾಗೂ ವಿಶೇಷ ಹೂಗಳಿಂದ ಸಿಂಗರಿಸಿದ್ದರಲ್ಲದೆ, ಗೋಪಾಲಸ್ವಾಮಿ, ದಾನಿಸ್ವಾಮಿ, ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಉತ್ಸವ ಸ್ವಾಮಿಯನ್ನು ಅಲಂಕಾರಗೊಳಿಸಲಾಗಿತ್ತು.