ಆಮ್ ಆದ್ಮಿ ಪಕ್ಷದ ಪೂರ್ವ ಭಾವಿ ಸಭೆ
ತುಮಕೂರು: ದೇಶದ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೆಗೇರಿದ ನಂತರ ತುಮಕೂರಿಲ್ಲೂ ಆಮ್ ಆದ್ಮಿ ಪಕ್ಷವನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಚಾಲನೆ ದೊರೆತಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಕೂಡ ನಡೆದಿದೆ. ಈ ಸಭೆಯಲ್ಲಿ ಪಕ್ಷದ ಧ್ಯೇಯೋದ್ದೇಶಗಳು, ಪಕ್ಷದ ಸಿದ್ಧಾಂತಗಳನ್ನು ಮನವರಿಕೆ ಮಾಡಿಕೊಡುವುದರ ಮೂಲಕ ಜಾನ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. ಪಕ್ಷಕ್ಕೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಪಕ್ಷದ ಸಂಚಾಲಕರಿಗೆ ತಿಳಿಸಲಾಯಿತು. ಪಾರದರ್ಶಕ ರಾಜಕೀಯ ವ್ಯವಸ್ಥೆಯನ್ನು ತರುವ ಹಿನ್ನೆಲೆಯಲ್ಲಿ ಶ್ರಮಿಸುವಂತೆ ಸಭೆಯಲ್ಲಿದ್ದ ಎಲ್ಲರನ್ನೂ ಕೋರಲಾಯಿತು.
ಪಕ್ಷದ ತುಮಕೂರು ಉಸ್ತುವಾರಿಯನ್ನು ನಾಗೇಶ್, ಮಂಜುನಾಥ್ ವಹಿಸಿದ್ದರು. ಸಭೆಯಲ್ಲಿ ಚಂದ್ರಶೇಖರ್, ಪ್ರತಿಮಾ, ಸುರೇಂದ್ರ ಷಾ, ಸಂತೋಷ್ ಇತರೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 8553408266, 9886541999 ಸಂಪರ್ಕಿಸುವಂತೆ ಕೋರಲಾಗಿದೆ.