ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್ ಪಟ್ಟಣದ ಹೃದಯಭಾಗದಲ್ಲಿ ಪ್ರತ್ಯಕ್ಷ ಚಿರತೆ

Rashmi Kasaragodu
Updated On : 31 Dec 2013, 2:02 am

ಕುಣಿಗಲ್: ಪಟ್ಟಣದ ಹೃದಯಭಾಗದಲ್ಲಿನ ಕುದುರೆಫಾರಂನಲ್ಲಿ ಭಾನುವಾರ ಮಧ್ಯರಾತ್ರಿ ಚಿರತೆ ಕಾಣಿಸಿಕೊಂಡು, ಫಾರಂ ಸಿಬ್ಬಂದಿ ಹಾಗೂ ಪೊಲೀಸರು ಚಿರತೆಗಾಗಿ ಬೆಳಗಿನ ಜಾವದವರೆಗೂ ಹುಡುಕಾಡಿದ ಘಟನೆ ನಡೆದಿದೆ. ಕುದುರೆಫಾರಂನ  ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯೊಬ್ಬರು ತಾವು ಚಿರತೆ ಹಾಗೂ ಎರಡು ಮರಿಗಳು ಹಾದು ಹೋಗಿ, ಮರದ ಮೇಲೆ ಏರಿದ್ದನ್ನು ನೋಡಿದಾಗಿ ಇತರೆ ಸಿಬ್ಬಂದಿಗೆ ತಿಳಿಸಿದರು. ಈ ಬಗ್ಗೆ ಆತಂಕಗೊಂಡ ಇತರೆ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಗಮನಕ್ಕೆ ತಂದರು. ಪಿಎಸೈ ಗುರುಪ್ರಸಾದ್, ಸಿಬ್ಬಂದಿ, ವಾಹನದ  ಬೆಳಕಿನ ಮತ್ತು ಟಾರ್ಚ್ಗಳ ಸಹಾಯದಿಂದ ಕುದುರೆಫಾರಂನ ವಿವಿಧೆಡೆಯಲ್ಲಿ ಬೆಳಗಿನ ಜಾವದವರೆಗೂ ಹುಡುಕಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಸದಾಶಿವ ಆಯೋಗದ ವರದಿ ಬಗ್ಗೆ ತೀರ್ಮಾನ
ಶಿರಾ: ಮುಂದಿನ ದಿನಗಳಲ್ಲಿ ಜಾತಿ ಗಣತಿ ನಡೆಸಿ, ಜನಸಂಖ್ಯೆಯಲ್ಲಿ ಯಾರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ ಎನ್ನುವುದನ್ನು ಪರಿಶೀಲಿಸಿ, ಪರ ವಿರೋಧಗಳನ್ನು ಪರಾಮರ್ಶಿಸಿ ಸದಾಶಿವ ಆಯೋಗದ ವರದಿ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರು ತಿಳಿಸಿದರು.
ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಕರ್ತರೊಡನೆ ಔಪಚಾರಿಕವಾಗಿ ಮಾತನಾಡಿದರು. ಹಿಂದಿನ ಸರಕಾರ ತಾಲೂಕಿನಲ್ಲಿ ಬಾಬು ಜಗಜೀವನರಾಮ್ ಭವನ, ವಾಲ್ಮೀಕಿ ಭವನಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿಯವರೆಗೂ ನಿವೇಶನ ಗುರುತಿಸಿಲ್ಲ. ಇದಕ್ಕೆ ತಿಳುವಳಿಕೆ, ಅನುಭವ ಕೊರತೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈಗ ನಾವು ಜಾಗದ ಲಭ್ಯತೆ, ಅದು ಸಂಸ್ಥೆಗೆ ಸೇರಿದ್ದಾ, ಸಂಸ್ಥೆ ನೋಂದಣಿಯಾಗಿದೆಯಾ, ನವೀಕರಿಸಿದೆಯಾ ಅದಕ್ಕೆ ಅನುದಾನ ನೀಡಿದಲ್ಲಿ ಎಲ್ಲಾ ಸಮಾಜದವರಿಗೂ ಅನುಕೂಲವಾಗುತ್ತಾ ಎಲ್ಲವನ್ನೂ ಪರಿಶೀಲಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement