ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಂಗಾಮತಸ್ಥರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಗೋಪಾಲ್ ಒತ್ತಾಯ

Rashmi Kasaragodu
Updated On : 31 Dec 2013, 2:00 am

ಪಾವಗಡ: ಬೆಸ್ತರು, ಬೆಸ್ತ, ಕೋಲಿ, ಗಂಗೆಕುಲ, ಪರಿವಾರ, ನಾಯಕ ಸೇರಿದಂತೆ ಸುಮಾರು 39ಹೆಸರುಗಳಲ್ಲಿ ಕರೆಯುವ ಗಂಗಾಮತಸ್ಥರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿವಂತೆ ಜನಾಂಗದ ಹಿರಿಯ ಮುಖಂಡ ದವಡಬೆಟ್ಟ ಡಿ.ವಿ.ಗೋಪಾಲ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶೋಷಣೆಗೆ ಒಳಗಾದ ಗಂಗಾಮತವು ರಾಜ್ಯದಲ್ಲಿ ಇಂದು ಮೂಲೆ ಗುಂಪಾಗಿರುವುದು ವಿಪರ್ಯಾಸ. ಸುಮಾರು 39 ಪರ್ಯಾಯ ಪದಗಳಿಂದ ಕರೆಯುವ ಗಂಗಾಮತ ಸಮಾಜವು ದೇಶದಲ್ಲೇ ಭಾರಿ ಜನಾಂಗ ಹೊಂದಿರುವ ಸಮಾಜ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೋಲಿ ಸಮಾಜವೆಂದು ಗುರುತಿಸಿಕೊಂಡ ಈ ಸಮಾಜ ರಾಜ್ಯ ಪ್ರದೇಶವಾರು ನಾನಾ ಹೆಸರುಗಳಿಂದ ತಮ್ಮನ್ನು ಗುರುತಿಸಿಕೊಂಡಿರುವುದಾಗಿ ಅವರು ತಿಳಿಸಿದರು. ಗಂಗಾ ಸಮಾಜದ ಕುಲ ಕಸುಬು ಮೀನುಗಾರಿಕೆ. ರಾಜ್ಯದಲ್ಲಿ ಒಂದೊಂದು ಪ್ರದೇಶ ಹಾಗೂ ಜಿಲ್ಲಾ ವಾರುಗಳಲ್ಲಿ ತಮ್ಮನ್ನು ನಾನಾ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆಂದ ಅವರು, ರಾಜ್ಯದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೊಗವೀರ, ಉತ್ತರ ಕನ್ನಡ ಹಾಗೂ ಕುಂದಾಪುರ ಜಿಲ್ಲೆಗಳಲ್ಲಿ ಖಾರ್ವಿ, ಹರಿಖಂತ್ರ,  ಮೋಗರೆ, ಗೊರಿಮತ ಹಾಗೂ ಉತ್ತರ ಕರ್ನಾಟಕದಲ್ಲಿ  ಕಬ್ಬೆರ, ಕಬ್ಬಲಿಗ, ಕಬ್ಬಲಿ, ಸುಣ್ಣಗಾರ, ಮೀನುಗಾರ, ತೊರೆಯ, ತಳವಾರ್ ಸೇರಿದಂತೆ ಇತರೆ ಹೆಸರುಗಳಿಂದ ಕರೆಯುತ್ತಾರೆ. ಮಟರಾಸಿ, ಮುದಿರಾಜರೆಂದು ಬಳ್ಳಾರಿ ಕೊಪ್ಪಳ ಜಿಲ್ಲೆಗಳಲ್ಲಿ ಕರೆಯುತ್ತಿದ್ದು ಗಂಗೆಕುಲ ಬೆಸ್ತ, ಬೆಸ್ತಾರ್, ಗಂಗೆ ಮಕ್ಕಳು ಗಂಗಾಮತ, ಗಂಗಾಮತಸ್ಥ, ಪರಿವಾರ ನಾಯಕರೆಂದು ಹಳೇ ಮೈಸೂರು ಪ್ರಾಂತ್ಯದಲ್ಲಿ ಕರೆಯುವುದು ವಾಡಿಕೆ ಇದೆ. ಅನೇಕ ಹೆಸರುಗಳಿಂದ ಕರೆಯುವ ಗಂಗಾಮತಸ್ಥ ಸಮಾಜವು ಜಾತಿವಾರು ಜಸಂಖ್ಯೆಯಲ್ಲಿ ರಾಜ್ಯದಲ್ಲಿ 5ನೇ ಅತಿದೊಡ್ಡ ಜನಾಂಗ. ಮೀನು ಹಿಡಿಯುವುದು, ಬಲೆ ಬಿಡುವುದು, ದೋಣಿ ಸಾಗಿಸುವುದು, ಸುಣ್ಣಸುಡುವುದು, ಇಟ್ಟಿಗೆ ಸುಡುವುದು, ಬೆಲ್ದಾರ್, ಬಡಗಿ ವ್ಯವಸಾಯ, ಇತರೆ ಕೆಲಸ ಮಾಡುತ್ತಿದ್ದಾರೆ.  ಎಂದರು.
ಈ ಜನಾಂಗದ ಸ್ಥಿತಿಗತಿಗಳನ್ನು ಕೂಡಲೇ ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಈ ಬಗ್ಗೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಂಬಂಧಪಟ್ಟ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ, ಕಾನೂನು ಸಚಿವರು ಮತ್ತು ಸಂಸದ ಜನಾರ್ದನ ಸ್ವಾಮಿ ಹಾಗೂ ಉಡುಪಿ ಶಾಸಕ ಪ್ರಮೋದ್ ಮದ್ವರಾಜ್ ಅವರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement