ಜ.1 ಕ್ಕೆ ಕಲ್ಪತರು ದಿನಾಚರಣೆ
ತುಮಕೂರು: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಜ.1 ರ ಬುಧವಾರ ಕಲ್ಪತರು ದಿನಾಚರಣೆಯನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ 7 ರವರೆಗೆ ಉಷ-ಕೀರ್ತನೆ ನೆರವೇರಲಿದ್ದು ಸಂಜೆ 6 ರಿಂದ 8 ರವರೆಗೆ ಭಜನೆ ಹಾಗೂ ಉಪನ್ಯಾಸಗಳನ್ನೊಳಗೊಂಡ ವಿಶೇಷ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರು ಕೋರಿದ್ದಾರೆ.