ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಗೆ ನಿವೃತ್ತಿ ಎಲ್ಲಿದೆ?

Rashmi Kasaragodu
Updated On : 31 Dec 2013, 2:03 am

ತುಮಕೂರು: ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ದುಡಿಯುವ ಪುರುಷ ನೌಕರರಿಗೆಲ್ಲಾ ನಿವೃತ್ತಿಯೆಂಬುದಿದೆ.
ಆದರೆ ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಗೆ ಮಾತ್ರ ಎಂದಿಗೂ ನಿವೃತ್ತಿಯಿಲ್ಲ. ಮಹಿಳೆಗೆ ನಿವೃತ್ತಿ ಪದ ಅನ್ವಯವಾಗುವುದಿಲ್ಲ. ಅದು ಮನೆ, ಸಂಸಾರದ ಜವಾಬ್ದಾರಿ ಹೊತ್ತಿರುವ ಮಹಿಳೆಯಾಗಿರಬಹುದು.
ಅಥವಾ ಉದ್ಯೋಗಸ್ಥ ಮಹಿಳೆಯಾದರೂ ಆಗಬಹುದು. ಮಹಿಳೆಗೆ ಜೀವನದ ಕಡೆಯವರೆಗೆ ನಿವೃತ್ತಿಯೆಂಬುದು ಇಲ್ಲವೇ ಇಲ್ಲ. ಅಡುಗೆ ಮನೆ ನಂಟು ಎಂದಿಗೂ ತಪ್ಪುವುದಿಲ್ಲ. ಒಟ್ಟಾರೆ ಮಹಿಳೆಗೆ ನಿವೃತ್ತಿಯಿಲ್ಲ ಎಂದು ನ್ಯಾ. ರತ್ನಕಲಾ ವಿಷಾದಿಸಿದರು.
ಕೆಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬಗಳ ಸಮಾಜ ನಮ್ಮದಾಗಿತ್ತು. ಅದು ಬರುಬರುತ್ತಾ ವಿಭಕ್ತ ಕುಟುಂಬಗಳಾಗಿವೆ. ಇಂದು ಮನುಷ್ಯನಿಗೆ ಮೊಬೈಲ್, ಕಂಪ್ಯೂಟರ್, ಐಪಾಡ್ ಇದ್ದರೇ ಅದೇ ಜೀವನ. ಗಂಡ ಹೆಂಡತಿಯೇ ಕುಟುಂಬ. ಮಕ್ಕಳು ಏಕೆ ಬೇಕು ಎಂಬ ದುರಾಲೋಚನೆಯತ್ತ ಸಮಾಜ ಹೋಗುತ್ತಿದೆ. ಮಕ್ಕಳಿದ್ದರೆ ಅದೇ ಅವಿಭಕ್ತ ಕುಟುಂಬ ಎಂಬಂತಹ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement