ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೌಲಭ್ಯ ಕೊಡಿಸುವಲ್ಲಿ ಎಐಟಿಯುಸಿ ಮುಖ್ಯ ಪಾತ್ರ

Rashmi Kasaragodu
Updated On : 31 Dec 2013, 2:01 am

ಕ.ಪ್ರ. ವಾರ್ತೆ    ತುಮಕೂರು    ಡಿ. 30
ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಕೊಡಿಸುವಲ್ಲಿ ಎಐಟಿಯುಸಿ ಸಂಘಟನೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎನ್. ಶಿವಣ್ಣ ಎಂದು ತಿಳಿಸಿದರು.
ಕುಪ್ಪೂರು ಗ್ರಾಮದಲ್ಲಿ ನೂತನವಾಗಿ ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದು ಕಟ್ಟಡ ಕಾರ್ಮಿಕರು ಜೀವನ ನಡೆಸಲು ಕಷ್ಟದಾಯಕವಾಗಿದೆ. ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳು ಇದ್ದರು ಕೂಡ ಯಾವೊಂದು ಸೌಲಭ್ಯವು ಕಟ್ಟಡ ಕಾರ್ಮಿಕರಿಗೆ ಸಿಗುತ್ತಿಲ್ಲ ಎಂದರು.
ಸರ್ಕಾರದಿಂದ ಕೋಟ್ಯಂತರ ಹಣ ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟಿದ್ದು ಹಣವನ್ನು ಸರ್ಕಾರ ಮುಂಜೂರು ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ಎಐಟಿಯುಸಿ ಕಟ್ಟಡ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರು ಬಹಳಷ್ಟಿದ್ದಾರೆ. ಇವರಿಗೆ ಕಾನೂನಿನ ಅರಿವಿನ ಕೊರತೆಯಿಂದ ಸವಲತ್ತುಗಳನ್ನು ಪಡೆಯಲು ವಿಫಲರಾಗಿದ್ದಾರೆ. ಆದ್ದರಿಂದ ಗ್ರಾಮಾಂತರಗಳಲ್ಲಿ ಸಂಘಟನೆಯನ್ನು ಸ್ಥಾಪಿಸಿ ಕಾರ್ಮಿಕರಿಗೆ ಅರಿವು ಮೂಡಿಸಿ ಸಂಬಂಧಪಟ್ಟ ಇಲಾಖೆಗಳಿಂದ ಸಿಗುವಂತ ಸವಲತ್ತುಗಳನ್ನು ಪಡೆಯಲು ಕಾರ್ಮಿಕರ ಗ್ರಾಮ ಸಂಘವು ಅತ್ಯವಶ್ಯಕವಾಗಿದೆ ಎಂದರು.
ಹೋರಾಟ ನಡೆಸಲಿ: ಈ ನಿಟ್ಟಿನಲ್ಲಿ ಕಾರ್ಮಿಕರು ಎಚ್ಚೆತ್ತುಕೊಂಡು ಹೆಚ್ಚಿನ ಸಂಖ್ಯೆಯಿಂದ ಸಂಘಟನೆಗಳನ್ನು ಕಟ್ಟಿಕೊಂಡು ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡಬೇಕು ಎಂದು ತಿಳಿಸಿದರು.
ಇಲಾಖೆಯಿಂದ ಬರುವ ಸವಲತ್ತುಗಳನ್ನು ಸರಳ ವಿಧಾನ ರೂಪಿಸಬೇಕು ಇದಕ್ಕೆ ಸರ್ಕಾರ ಸ್ಪಂದಿಸಿ ಈಗಾಗಲೆ ಮಂಡಳಿಗಳಲ್ಲಿ 2.100 ಕೋಟಿ ರು.ಗಳಿದ್ದು ಈ ಹಣವನ್ನು ಈಗಾಗಲೆ  ನೋಂದಾಯಿತರಾಗಿರುವ ಕಾರ್ಮಿಕರಿಗೆ ಸಲ್ಲಿಸಿರುವ ಅರ್ಜಿ ಆಧಾರದ ಮೇಲೆ ಆದಷ್ಟು ಹಣ ಮಂಜೂರು ಮಾಡಬೇಕೆಂದು ಮಾತನಾಡಿದರು.ಸಭೆಯನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ ಮಾತನಾಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘಟನೆಯ ಕುರಿತು ಅಶ್ವತ್ಥನಾರಾಯಣ್, ಗೌಡರಂಗಪ್ಪ, ಶಾಖಾ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಗೋಪಾಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸುಜಾತಮ್ಮ, ಸಂಘಟನಾ ಕಾರ್ಯದರ್ಶಿ ನಾಗರತ್ನ ಶಿವಕುಮಾರ್, ಕರುಣಸ್ವಾಮಿ, ಕೃಷ್ಣಪ್ಪ ಮುಂತಾದವರು ಮಾತನಾಡಿದರು. ಈ ಸಭೆಯಲ್ಲಿ ಗ್ರಾಮದ ಮುಖಂಡರಾದ ರಾಮಚಂದ್ರಪ್ಪ, ಬೆಟ್ಟಣ್ಣ, ಗ್ರಾ.ಪಂ ಸದಸ್ಯೆ ಹೊನ್ನಪ್ಪ, ಅಂಜಿನಮ್ಮ, ಸುಜಾತಮ್ಮ, ಶಂಕರಪ್ಪ, ಮಂಜುನಾಥ್, ಮೂರ್ತಿ, ನಾಗರಾಜು ಇನ್ನು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement