ಹೆಜ್ಜೇನು ಕಚ್ಚಿ ವ್ಯಕ್ತಿ ಸಾವು, ಇನ್ನೊಬ್ಬಗೆ ತೀವ್ರ ಗಾಯ
ಪಾವಗಡ: ಇಬ್ಬರ ಮೇಲೆ ಆಕಸ್ಮಿಕವಾಗಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಒಬ್ಬ ವ್ಯಕಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರ ಅಸ್ವಸ್ತರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ವೈ.ಎನ್ ಹೊಸಕೋಟೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಹೆಜ್ಜೇನು ದಾಳಿಗೆ ಸಿಕ್ಕಿ ಮೃತ ಪಟ್ಟ ವ್ಯಕ್ತಿ ಸುಣ್ಣದ ಕಲ್ಲುಭೂಷಪ್ಪ (50) ಎಂಬುವರು. ಹೆಜ್ಜೆನಿನ ದಾಳಿಗೆ ಸಿಕ್ಕಿ ತೀವ್ರ ಗಾಯಗಳಾಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮತ್ತೊಬ್ಬ ವ್ಯಕ್ತಿ ವೆಂಕಟೇಶ್ (40)ಎಂಬುವರು ವೈ.ಎನ್. ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದಿನಂತೆ ಕೆಲಸ ಕಾರ್ಯಕ್ಕೆ ತೆರಳಿದ ಭೂಷಪ್ಪ ಹಾಗೂ ವೆಂಕಟೇಶ್ ಬಡಾವಣೆ ಪಕ್ಕದ ಬೆಟ್ಟಕ್ಕೆ ಬೆಟ್ಟದ ಬುಡದ ಗಿಡ ಮರಗಳ ಮಧ್ಯೆ ಹೋಗುತ್ತಿರುವಾಗ ಮರದ ಮೇಲಿಂದ ಡಿಢೀರೆಂದು ಹಾರಿದ ಜೇನು ಹುಳುಗಳು ಇಬ್ಬರನ್ನು ಆವರಿಸಿ ಕಚ್ಚಿವೆ. ಜೇನು ಹುಳುಗಳ ಕಡಿತದಿಂದ ತಪ್ಪಿಸಿಕೊಳ್ಳಲಾಗದ ಭೂಷಪ್ಪ ಮತ್ತು ವೆಂಕಟೇಶ್ ಕಿರಾಚಾಡಿಕೊಂಡಿದ್ದಾರೆ. ಧ್ವನಿ ಕೇಳಿಸಿಕೊಂಡ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಜೇನು ಹುಳುಗಳಿಂದ ಅವರನ್ನು ರಕ್ಷಿಸಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭೂಷಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ವೆಂಕಟೇಶ್ ಎಂಬುವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.