ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದೇಶ ಅಧ್ಯಯನ ಪ್ರವಾಸ ವರದಿ ಧೂಳು ತಿನ್ನುತ್ತಿದೆ

Rashmi Kasaragodu
Updated On : 1 Jan 2014, 12:47 pm

ತುಮಕೂರು: ಶಾಸಕರ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಏರ್ಪಾಟಾಗುವ ವಿದೇಶ ಪ್ರವಾಸಕ್ಕೆ ತಮ್ಮ ವಿರೋಧವಿಲ್ಲ. ಆದರೆ ಯಾವಾಗ ಹೋಗಬೇಕು. ಯಾವಾಗ ಹೋಗಬಾರದು ಅನ್ನೋದು ಮುಖ್ಯ ಎಂದು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2004 ರಿಂದ ಶಾಸಕರಿಗೆ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಏರ್ಪಡಿಸಲಾಗುತ್ತಿದೆ. ಇದಕ್ಕೂ ಮೊದಲಿರಲಿಲ್ಲ. ಆದರೆ ಸಂಸದರಿಗೆ ಈ ಅವಕಾಶ ಮೊದಲಿನಿಂದಲೂ ಇದೆ ಎಂದು ಮಾಹಿತಿ ನೀಡಿದರು. ಶಾಸಕರು ಅಧ್ಯಯನದ ಹಿನ್ನೆಲೆಯಲ್ಲಿ ಕೈಗೊಳ್ಳುವ ವಿದೇಶ ಪ್ರವಾಸದ ವರದಿ ಚರ್ಚೆ ಆಗುವುದಿಲ್ಲ. ಧೂಳು ತಿನ್ನುತ್ತಿದೆ. ಇದೊಂದು ವಿಷಾದನೀಯ ಸಂಗತಿ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಕ್ರೋಢೀಕರಿಸಿ ಮುನ್ನಡೆಯಬೇಕು ಎಂದರು.
ಅಧ್ಯಯನಕ್ಕೆಂದು ವಿದೇಶಕ್ಕೇ ಹೋಗಬೇಕಿಲ್ಲ. ನಮ್ಮ ದೇಶದಲ್ಲೇ ಅಧ್ಯಯನ ನಡೆಸಲು ಬೇಕಾದಷ್ಟು ಸಂಗತಿಗಳಿವೆ. ವಿದೇಶಗಳಲ್ಲಿ ಕಲಿಯುವ ವಿಷಯ ಹೆಚ್ಚಿಲ್ಲ. ಆದರೆ ಶಿಸ್ತಿದೆ. ದಂಡವೂ ಇದೆ. ವಿದೇಶಗಳಿಗೆ ಹೋಗುವ ನಾವು ಕೂಡಲೇ ಆ ದೇಶದ ಕಾನೂನು, ಶಿಸ್ತಿಗೆ ಭಯ ಬಿದ್ದು ಪಾಲಿಸುತ್ತೇವೆ. ರಸ್ತೆಯಲ್ಲಿ ಉಗುಳಲೂ ಹಿಂಜರಿಯುತ್ತೇವೆ. ಶೌಚಾಲಯಗಳನ್ನು ಕಡ್ಡಾಯವಾಗಿ ಉಪಯೋಗಿಸುತ್ತೇವೆ. ಆದರೆ ಭಾರತಕ್ಕೆ ಬಂದ ಕೂಡಲೇ ಬಿಡಾಡಿ ದನಗಳ ಹಾಗೆ ವರ್ತಿಸುತ್ತೇವೆ. ಅದೇ ಹಳೇ ಚಾಳಿಯನ್ನು ಮುಂದುವರೆಸುತ್ತೇವೆ ಎಂದು ರಾಜಣ್ಣ ವಿಷಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement