ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯೆ ಪಡೆದು ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಲು ಮುಂದಾಗಿ

Rashmi Kasaragodu
Updated On : 1 Jan 2014, 12:50 pm

ಕ,ಪ್ರ,ವಾರ್ತೆಮಧುಗಿರಿ  ಡಿ.31
ವಿದ್ಯೆ ಪಡೆದು ಸಮಾಜದಲ್ಲಿ ಗೌರವದಿಂದ ನೆಮ್ಮದಿ ಜೀವನ ನಡೆಸಲು ಮುಂದಾಗಬೇಕು ಎಂದು ಡಿಡಿಪಿಐ ಟಿ.ಎಸ್.ಆಂಜನಪ್ಪ ಕರೆ ನೀಡಿದರು. ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಚೇತನ ಆಂಗ್ಲ ಶಾಲೆ ಏರ್ಪಡಿಸಿದ್ದ ಚೇತನ ಕಲ್ಚರಲ್ ಫೆಸ್ಟ್ 2013ರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಸಂಪದ್ಭರಿತ ಸಾಂಸ್ಕೃತಿಕ ಯೋಗ ಭೂಮಿ, ಪಾಶ್ಚಿಮಾತ್ಯ ಭೋಗ ಭೂಮಿಯ ಕರಿ ನೆರಳು ನಮ್ಮ   ಸಂಸ್ಕೃತಿ, ಸಂಸ್ಕಾರವನ್ನು  ನಾಶ ಮಾಡಲು ಹವಣಿಸುತ್ತಿದೆ ಎಂದರು.
ಪೋಷಕರು ಇಂಗ್ಲಿಷ್ ವ್ಯಾಮಹೋಕ್ಕೆ ಒಳಗಾಗಿ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಕಲಿಸುವುದು ನಶಿಸಿ ಹೋಗುತ್ತಿದೆ. ದೀಪ ಹಚ್ಚುವ ಸಂಸ್ಕೃತಿ ನಮ್ಮದು ಎಂದರು.
ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ ಮಧುಗಿರಿ ಶೈಕ್ಷಣಿಕ ಜಿಲ್ಲೆ  ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಮುಂದೂ ಕೂಡ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಲಿ ಎಂದರು. ಸಂಸ್ಥಾಪಕ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಪೋಷಕರ ಮತ್ತು ವಿದ್ಯಾರ್ಥಿಗಳ ಬಹು ದಿನಗಳ  ನಿರೀಕ್ಷೆಯಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕಟ್ಟಡದಲ್ಲೇ ಶಾಲೆ ಆರಂಭಿಸಲಾಗುವುದು ಎಂದರು.
ಬಿಇಓ ವೈ.ಎನ್.ರಾಮಕೃಷ್ಣಯ್ಯ ಮಾತನಾಡಿದರು. ಮುಖ್ಯ ಶಿಕ್ಷಕ ಹೊನ್ನೇಶಪ್ಪ ಶಾಲಾ ವರದಿ ವಾಚಿಸಿದರು.ನಂತರ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನ ಮೆಚ್ಚಿಗೆಗೆ ಪಾತ್ರವಾಯಿತು.                                  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement