ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಮೀನು ವಿವಾದ: ಮೂವರಿಗೆ ಪೆಟ್ಟು

Parashurama
Updated On : 1 Feb 2013, 10:48 am

ಪಾವಗಡ: ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ    ಎರಡು ಕೋಮಿನ ಮಧ್ಯೆ ಹೊಡೆದಾಟ ನಡೆದು ಬೋವಿ ಜನಾಂಗದ ಮೂವರಿಗೆ ಪೆಟ್ಟಾಗಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ವಡ್ಡರಹಟ್ಟಿ ಬೋವಿ ಜನಾಂಗದ ವೆಂಕಟಪ್ಪ, ನರಸಮ್ಮ, ಹನುಮಕ್ಕ, ಅನಸೂಯಮ್ಮ ಎಂಬುವರೇ ಹೊಡೆದಾಟದಲ್ಲಿ ದೊಣ್ಣೆಗಳಿಂದ ಹೊಡೆತ ತಿಂದು ಪೆಟ್ಟಾಗಿ ಆಸ್ಪತ್ರೆಗೆ ದಾಖಲಾದವರು.
ವಡ್ಡರಹಟ್ಟಿ ಗ್ರಾಮದ ವೈ.ರಾಮಪ್ಪ ಹಾಗೂ ತಮ್ಮ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಸರ್ವೆನಂಬರ್ 63, 2ರ ಜಮೀನಲ್ಲಿ ಮಾಲೀಕ ವೈ.ರಾಮಯ್ಯ ಎಂಬುವರು ಕಳೆದ 10 ವರ್ಷಗಳ ಹಿಂದೆ ಏಕಾಭಿಪ್ರಾಯದೊಂದಿಗೆ ಆದೇ ಗ್ರಾಮದ ಗೊಲ್ಲರ ಚಿಕ್ಕಣ್ಣ ಎಂಬುವರಿಗೆ ರು. 5 ಸಾವಿರ ಆದೇ ಸರ್ವೆನಂಬರಿನ ಬೆಲೆಬಾಳುವ 13ಗಂಟೆ ಜಮೀನು ಮಾರಾಟ ಮಾಡಲಾಗಿದ್ದು, ಈ ಜಮೀನು ಮಾರಾಟ ಮಾಡಿರುವ ವಿಚಾರವಾಗಿ ಗೊಲ್ಲರ ಚಿಕ್ಕಣ್ಣ ಹಾಗೂ ವೈ.ರಾಮಯ್ಯ ಅಣ್ಣ ತಮ್ಮಂದಿರ ಮಧ್ಯೆ ಆಗಾಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಜಮೀನು ಮಾಲೀಕ ವೈ.ರಾಮಯ್ಯ ಅಣ್ಣ ತಮ್ಮಂದಿರರಿಗೆ ಗೊತ್ತಿಲ್ಲದೆ ಅವರ ಸಹಿ ಕೂಡ ಪಡೆಯದೆ 13ಗಂಟೆ ಜಮೀನು ಚಿಕ್ಕಣ್ಣನಿಗೆ ಮಾರಾಟ ಮಾಡಿರುವುದು ಆನ್ಯಾಯ ಇದರಿಂದ ನಮ್ಮ ಕುಟುಂಬಕ್ಕೆ ನಷ್ಟವಾಗಿದೆ ನೀವು ಅಣ್ಣ ವೈ.ರಾಮಯ್ಯನಿಗೆ ಕೊಟ್ಟ 5 ಸಾವಿರದ ಜೊತೆಗೆ, ಇನ್ನೂ ಹೆಚ್ಚಿಗೆ 15 ಸಾವಿರ ಕೊಡುತ್ತೇವೆ ನಮ್ಮ ಜಮೀನು ಬಿಟ್ಟುಕೂಡಿ ಎಂದು ವೈ.ರಾಮಯ್ಯ ತಮ್ಮಂದಿರಾದ ಜಂಪ್ಲಯ್ಯ, ಯಲ್ಲಪ್ಪ ಮುಂತಾದವರು ಜಮೀನು ಖರೀದಿಸಿದ ಚಿಕ್ಕಣ್ಣನನ್ನು ಬೇಡಿಕೊಂಡರೂ ಕೊಡದೆ ಆತ ಜಮೀನು ಬಿಟ್ಟುಕೊಡಲು ನಿರಾಕರಿಸಿದ ಕಾರಣ ಆನ್ಯಾಯ ವಿರುದ್ಧ ಜಂಪ್ಲಯ್ಯ ಸ್ಥಳೀಯ ನ್ಯಾಯಾಲಯದ ಮೊರೆ ಕೂಡ ಹೋಗಲಾಗಿದೆ.
ಗ್ರಾಪಂನಲ್ಲಿ ಕೃಷ್ಣ ಕುಟೀರ ಯೋಜನೆಯಲ್ಲಿ ಚಿಕ್ಕಣ್ಣನಿಗೆ ಮನೆ ಮಂಜೂರಾತಿಯಾದ ಕಾರಣ ವೈ.ರಾಮಯ್ಯನಿಂದ 5ಸಾವಿರಕ್ಕೆ ಖರೀದಿಸಿದ್ದ 13ಗಂಟೆ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡುವಾಗ ಗೊಲ್ಲ ಹಾಗೂ ಬೋವಿ ಜನಾಂಗದ ಮಧ್ಯೆ ತೀವ್ರ ಹೊಡೆದಾಟ ನಡೆದು ಚಿಕ್ಕಣ್ಣನ ಸಂಬಂಧಿಕರಾದ ಚಿಕ್ಕಣ್ಣ, ಯರಣ್ಣ, ಕರಿಯಣ್ಣ ನಾಗರಾಜ್ ಈರಣ್ಣ ವಿನೋದಮ್ಮ ಮುಂತಾದವರ ವಿರುದ್ಧ ಬೋವಿ ಜನಾಂಗದ ಜಂಪ್ಲಯ್ಯ ಜಾತಿನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತಾಲೂಕು ಜೆಡಿಎಸ್ ಹಿರಿಯ ಮುಖಂಡ ವಡ್ಡರಹಟ್ಟಿ ದಾಸಪ್ಪ, ಜಿಲ್ಲಾ ಎಸ್ಪಿ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments