ಮರೆಯಾಗುತ್ತಿರುವ ಮಾನವೀಯತೆ: ಕೃಷ್ಣಪ್ಪ
ತುರುವೇಕೆರೆ: ಜಾಗತೀಕರಣ ಬೆಳೆಯುತ್ತಿದ್ದಂತೆ ಹಣದ ವ್ಯಾಮೋಹ ಅತಿಯಾಗುತ್ತಿದೆ. ಹಣದ ಬೇಟೆಗೆ ಹೊರಟಿರುವ ಮನುಷ್ಯ ಮಾನವೀಯ ಮೌಲ್ಯಗಳ ಅರ್ಥ ದೂರ ಮಾಡುತ್ತಿದ್ದಾನೆ. ಯಾಂತ್ರಿಕ ವಸ್ತುವಿನ ರೀತಿ ಮನುಷ್ಯನನ್ನು ಕಾಣವ ಸ್ಥಿತಿ ಬಂದೊದಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ವಿದ್ಯಾರ್ಜನೆ ಮಾಡಿದರೆ ಮಾತ್ರ ಸಾಲದು. ಮಾನವೀಯತೆಯನ್ನೂ ಸಹ ಅಳವಡಿಸಕೊಳ್ಳಬೇಕು. ಹಣ ದುಡಿಮೆಯಿಂದ ಕೇವಲ ಐಹಿಕ ಸೌಖ್ಯವನ್ನು ಮಾತ್ರ ಸಂಪಾದಿಸಬಹುದೇ ಹೊರೆತು ಮನುಷ್ಯರ ನಡುವಿನ ಪ್ರೀತಿಯಿದ ದೂರವಾಗುವುದು ನಿಶ್ಚಿತ ಎಂದರು. ಉಪನ್ಯಾಸಕರು ಕೇವಲ ಪುಸ್ತಕದಲ್ಲಿರುವ ಸಂಗತಿಗಳನ್ನು ಮಾತ್ರ ಬೋಧಿಸದೆ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ಹೊತ್ತ ಸಂಗತಿಗಳನ್ನೂ ಸಹ ಬೋಧಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕರು ಕರೆ ನೀಡಿದರು. ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸಮಿತಿ ಅಧ್ಯಕ್ಷ ಎ.ಬಿ.ಜಗದೀಶ್, ಶ್ರೀನಿವಾಸ್, ತಾಪಂ ಅಧ್ಯಕ್ಷ ಎಂ.ಡಿ.ರಮೇಶ್ಗೌಡ, ಜಿಪಂ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಡಾ.ಬಿ.ನಂಜಪ್ಪ, ಎನ್.ಬಿ.ಸಿ ನಟರಾಜು, ಪ್ರಾಂಶುಪಾಲರಾದ ಜುಂಜಯ್ಯ, ಗಣೇಶ್ಮೂರ್ತಿ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾನಂದ್, ಉಪನ್ಯಾಸಕ ರಾಮಯ್ಯ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.