ತುಮಕೂರು

ಮಾನವೀಯತೆ ಮೆರೆದ ಸುರೇಶ್

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ನಾಗತಿಹಳ್ಳಿ ವಾಸಿ
ಎನ್.ಜಿ.ರೇಖಾ ಮತ್ತು ಅವರ ಗಂಡ ಗಂಗಾಧರಯ್ಯ ಎಂಬುವವರು ಬೈಕ್‌ನಲ್ಲಿ ಅರಸೀಕೆರೆಗೆ ಹೋಗುವಾಗ ತಮ್ಮ  ಬ್ಯಾಗ್‌ನಲ್ಲಿದ್ದ 5ಸಾವಿರ ಹಣ, 6ಗ್ರಾಂ ಚಿನ್ನದ ಓಲೆ,1 ಮೊಬೈಲ್ ಮತ್ತು ಮನೆಯ ಕೀಲಿಕೈ ಬಿದರೆಗುಡಿ ಕಾವಲಿನ ಹತ್ತಿರ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೀಳಿಸಿಕೊಂಡು ಹೋಗಿದ್ದರು. ಇದೇ ಮಾರ್ಗವಾಗಿ ಚಲಿಸುತ್ತಿದ್ದ ಚಿಕ್ಕಹೊನ್ನವಳ್ಳಿ ಗ್ರಾಮದ ಸುರೇಶ್ ಅವರಿಗೆ ಈ ಬ್ಯಾಗ್ ಸಿಕ್ಕಿದ್ದು, ತಕ್ಷಣ ಹತ್ತಿರದ ಹೊನ್ನವಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಎಎಸ್‌ಐ ಬೋಮ್ಮಯ್ಯ ಮತ್ತು ಸಿಬ್ಬಂದಿ ವರ್ಗ ಬ್ಯಾಗನ್ನು  ವಾರಸುದಾರರಿಗೆ ಒಪ್ಪಿಸಿದ್ದಾರೆ.  
ಪದಾಧಿಕಾರಿಗಳ ಆಯ್ಕೆ
ತುಮಕೂರು: ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವೈ.ಎನ್. ಹೊಸಕೋಟೆ ನಟರಾಜ್, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಯೋಗಾನಂದ್, ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ್ ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್‌ಕುಮಾರ್, ಜಿಲ್ಲಾ ಕಾರ್ಯದರ್ಶಿಯಾಗಿ ವಿನಯ್, ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಮೈಲಾರಪ್ಪ, ಖಜಾಂಜಿಯಾಗಿ ರವಿಕುಮಾರ್, ಕಾರ್ಯದರ್ಶಿಯಾಗಿ ಮೋಹನ್ ಕುಮಾರ್, ಸಹಕಾರ್ಯದರ್ಶಿಯಾಗಿ ರಂಗಸ್ವಾಮಯ್ಯ, ಸಂಚಾಲಕರಾಗಿ ಹೆಬ್ಬೂರು ಸತೀಶ್, ನಗರಾಧ್ಯಕ್ಷರಾಗಿ ವಿಜಯ್, ಕಾನೂನು ಸಲಹೆಗಾರರಾಗಿ ಹನುಮಂತರಾಜು ಆಯ್ಕೆಯಾಗಿದ್ದಾರೆ.
ರಾಷ್ಟ್ರಮಟ್ಟದ ಸಾಧನೆ
ತುಮಕೂರು: ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದ 58ನೇ ರಾಷ್ಟ್ರೀಯ ಶಾಲಾ ಕೋ-ಕೋ ಪಂದ್ಯಾವಳಿಯಯಲ್ಲಿ ಜಿಲ್ಲೆಯ 6 ಬಾಲಕರು ಹಾಗೂ ಮೂರು ಬಾಲಕಿಯರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದಲ್ಲಿ ಬಾಲಕರು ದ್ವಿತೀಯ  ಹಾಗೂ ಬಾಲಕಿಯರು ತೃತೀಯ ಸ್ಥಾನ ಗಳಿಸಿದ್ದಾರೆ. ನಾಗೇಶ್ ಕೆ.ಆರ್. ಸಂಜಯ ಯಾದವ್, ಪ್ರಜ್ವಲೆ.ಎಚ್, ಅಭಿಲಾಶ್ ಕುಮಾರ್, ರವಿಕುಮಾರ್, ವಿನಯ್‌ಕುಮಾರ್, ಜಮುನಾ, ಯಮುನಾ, ಶಿಲ್ಪ ಕೆ. ಅವರು ಸಾಧನೆ ಮಾಡಿರುವ ವಿದ್ಯಾರ್ಥಿಗಳು.
ನಾಳೆ ಅಭಿನಂದನೆ
ತುಮಕೂರು: ಇಲ್ಲಿಗೆ ಸಮೀಪದ ಸತ್ಯಮಂಗಲ ಚಕ್ರವರ ಮಹಾಲಕ್ಷ್ಮೀ ಸನ್ನಿಧಿಯಲ್ಲಿ 3 ರಂದು ಬೆಳಗ್ಗೆ 10.30 ಕ್ಕೆ ಹಿರಿಯ ರಂಗಭೂಮಿ ನಟ ಡಿ.ಹೆಚ್.ಸಿದ್ಧಗಂಗಯ್ಯ ಅವರಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿದೆ. ಧರ್ಮಾಧಿಕಾರಿ ಸುದರ್ಶನ್ ಆಶೀರ್ವಚನ ನೀಡಲಿದ್ದಾರೆ. ಸಿ.ವಿ. ಮಹೇದವಯ್ಯ  ಉದ್ಘಾಟನೆ ನೆರವೇರಿಸಲಿದ್ದಾರೆ. ಹೆಚ್.ವಿ.ಪಾಂಡುರಂಗ ಶೆಟ್ಟರು  ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಲಕ್ಷ್ಮಣದಾಸ್ ಅಭಿನಂದನಾ ಭಾಷಣ  ಮಾಡಲಿದ್ದಾರೆ. ನಿರಂಜನ್, ಬಸವಲಿಂಗಪ್ಪ, ಬಂಡೇಪಾಳ್ಯನಾಗರಾಜು,ಸದಾಶಿವಯ್ಯ.ಎಂ.ಬಿ. ಕುಮಾರ್, ವೈ.ಎನ್.ಶಿವಣ್ಣ, ಡಿ.ಶಿವಮಹಾದೇವಯ್ಯ, ಡಿ.ಎಸ್. ಹರೀಶ್, ಕೆ.ಪುಟ್ಟರುದ್ರಯ್ಯ, ಕೆ.ಸಿ.ನರಸಿಂಹಮೂರ್ತಿ, ಮುನಿರಾಜು, ವೆಂಕಟೇಶ್, ಮುನಿರಾಜು ಉಪಸ್ಥಿತರಿರುವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ