ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರು. 8 ಕ್ಕೆ ಹಣ್ಣಿನ ರಸ, # 10ಕ್ಕೆ ಫ್ರೂಟ್ ಸಲಾಡ್

Parashurama
Updated On : 1 Feb 2013, 10:51 am

ತುಮಕೂರು: ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ಎಲ್ಲಾ ಹಾಪ್ ಕಾಮ್ಸ್ ಮಳಿಗೆಯಲ್ಲಿ ಹಣ್ಣಿನ ಜ್ಯೂಸ್ ಹಾಗೂ ಫ್ರೂಟ್ ಸಲಾಡ್ ತಯಾರಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
ನಗರದ ಜಿಲ್ಲಾ ತೋಟಗಾರಿಕಾ ಕಚೇರಿ ಆವರಣದ ಹಾಪ್ ಕಾಮ್ಸ್ ಮಳಿಗೆಯಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ರಾಮಯ್ಯ ಶುಕ್ರವಾರ ಜ್ಯೂಸ್ ಹಾಗೂ ಸಲಾಡ್ ಮಾರಾಟ ಸೇವೆಗೆ ಚಾಲನೆ ನೀಡಿದರು.
ಬೇಸಿಗೆ ಆರಂಭವಾಗುವ ವೇಳೆಗೆ ನಗರದ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಕಡಿಮೆ ದರದಲ್ಲಿ, ಗುಣಮಟ್ಟದ ಹಣ್ಣಿನ ರಸ ಹಾಗೂ ಫ್ರೂಟ್ ಸಲಾಡ್ ಮಾರಾಟ ಮಾಡಲಾಗುವುದು. 8 ರು.ಗೆ ಒಂದು ಲೋಟ ತಣ್ಣನೆ ಹಣ್ಣಿನ ರಸ, 10 ರು.ಗೆ ಒಂದು ಪ್ಲೇಟ್ ಫ್ರೂಟ್ ಸಲಾಡ್ ಮಾರಾಟ ಮಾಡಲಾಗುತ್ತಿದ್ದು ಖಾಸಗಿ ಮಳಿಗೆಗಿಂತಲೂ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುವುದು ಎಂದು ರಾಮಯ್ಯ ತಿಳಿಸಿದರು. ನಗರದಲ್ಲಿ ಈಗ 8 ಹಾಪ್ ಕಾಮ್ಸ್ ಮಳಿಗೆಗಳಿವೆ. ಎಲ್ಲಾ ಬಡಾವಣೆಗಲ್ಲೂ ಮಳಿಗೆ ತೆರೆಯಲು ಬೇಡಿಕೆ ಬಂದಿದ್ದು ನಗರಸಭೆ 10 ಬೈ 15 ಚದುರ ಅಡಿ ಜಾಗ ನೀಡಿದರೆ ಮಳಿಗೆ ತೆರೆಯಲು ಅವಕಾಶವಾಗುತ್ತದೆ. ಈ ವಿಚಾರವಾಗಿ ನಗರಸಭೆ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಕೇಶವ ಮಾತನಾಡಿ, ತುಮಕೂರು ನಗರವಲ್ಲದೆ ಶಿರಾ ಹಾಗೂ ಮಧುಗಿರಿಯಲ್ಲಿರುವ ಮಳಿಗೆಗಳಲ್ಲೂ ಜ್ಯೂಸ್ ಹಾಗೂ ಸಾಲಾಡ್ ಮಾರಾಟ ಮಾಡಲಾಗುವುದು. ಬೇಸಿಗೆಯ ಬಿಸಿಲ ತಾಪ ಹೆಚ್ಚಾಗಿ ಆಯಾಸಗೊಂಡವರು ಹಣ್ಣಿನ ರಸ ಅಥವಾ ಪ್ರೂಟ್ ಸಲಾಡ್ ಸೇವಿಸಿದರೆ ಆಯಾಸ ನಿವಾರಣೆಯಾಗುತ್ತದೆ ಎಂದರು.
ಎಲ್ಲಾ ಮಳಿಗೆಗಳಿಗೂ ಜ್ಯೂಸ್ ಹಾಗೂ ಸಾಲಡ್ ತಯಾರಿಕೆಗಾಗಿ ಸುಸಜ್ಜಿತ ಯಂತ್ರಗಳನ್ನು ನೀಡಲಾಗುವುದು. ಈ ಮೂಲಕ ಹಾಪ್‌ಕಾಮ್ಸ್ ಸೇವೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲಾಗುವುದು ಎಂದರು. ಸಿಬ್ಬಂದಿ ಮಾದೇಗೌಡ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments