'ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆ ಸಲ್ಲ'
ಶಿರಾ: ಇಂದಿನ ವೈಜ್ಞಾನಿಕ ಯುಗದಲ್ಲೂ ಅನೇಕ ಕಡೆ ಇನ್ನೂ ಕೆಲವು ಮೂಢನಂಬಿಕೆಗಳಿಗೆ ಜೋತು ಬಿದ್ದಿದ್ದು, ಇಂತಹ ನಂಬಿಕೆ ದೂರ ಮಾಡದ ಹೊರತು ಜೀವನದ ಕಷ್ಟಗಳ ಅಡ್ಡಗೋಡೆ ದಾಟಲು ಅಸಾಧ್ಯ ಎಂದು ಚಿಂತಕ ಕೆ.ದೊರೈರಾಜ್ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ರಂಗನಾಥ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನವೋದಯ ಯುವ ವೇದಿಕೆ ವತಿಯಿಂದ ನಡೆದ “ಅಜ್ಞಾನದಿಂದ ವಿಜ್ಞಾನದೆಡೆಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಕ್ಷರಸ್ಥರನ್ನಷ್ಟೆ ಅಲ್ಲದೆ, ಅಕ್ಷರಸ್ಥರನ್ನೂ ತಂತ್ರ-ಮಂತ್ರಗಳ ಮೂಲಕ ವಿಸ್ಮಿತರನ್ನಾಗಿ ಮಾಡಿ ಹಣ ಸಂಗ್ರಹಿಸುವ ದಂಧೆ ನಡೆಸುವವರ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಮಾರ್ಕಾಂಡೇಯ ಮುನಿ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮಗಳ ಮೂಲ ಒಂದೇ ಆಗಿದ್ದು, ಎಲ್ಲಾ ಧರ್ಮಗಳ ಗುರಿಯೂ ಶಾಂತಿ, ನೆಮ್ಮದಿ ಕಂಡುಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ಜನತೆ ಧಾರ್ಮಿಕತೆ ಉಳಿಸಿಕೊಂಡು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದರು. ಪವಾಡ ರಹಸ್ಯ ಬಯಲು ಮಾಡುವ ಕಾರ್ಯಕ್ರಮವನ್ನು ಹುಲಿಕಲ್ ನಟರಾಜು ನಡೆಸಿಕೊಟ್ಟರು.
ಇದೆ ಸಂದರ್ಭದಲ್ಲಿ ಯುವ ಸಾಹಿತಿ ಎಸ್.ಎಲ್.ರಮೇಶ್ ಅವರ ಕಾಮಧೇನು ಪುಸ್ತಕ ಬಿಡುಗಡೆ ಮಾಡಲಾಯಿತು..ರಂಗನಾಥ್, ಜಿಟಿಒ ಕೃಷ್ಣಪ್ಪ, ಕಳ್ಳಂಬೆಳ್ಳ ಜಯರಾಮ್,ತಾಲೂಕು ಕಸಾಪ ಅಧ್ಯಕ್ಷ ವೈ.ನರೇಶ್ಬಾಬು, ನಗರಸಭೆ ಸದಸ್ಯ ಕೆ.ಮಂಜುನಾಥ್, ರೇವಣ್ಣ ಸಿದ್ದೇಶ್ವರ, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ ಮತ್ತಿತರರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.