ವಿದ್ಯಾರ್ಥಿಗಳು ಭಾರತದ ಭವಿಷ್ಯದ ಶಕ್ತಿ
ಕುಣಿಗಲ್: ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯದ ಶಕ್ತಿಯಾಗಿದೆ. ಆದರೆ, ದೇಶ ನಿರ್ಮಾಣ ದಿಸೆಯಲ್ಲಿ ಭವಿಷ್ಯದ ಶಕ್ತಿಗೆ ತಮ್ಮ ಪಾತ್ರದ ಅರಿವಿನ ಕೊರತೆಯಾಗಿರುವುದು ನಿಜಕ್ಕೂ ಖೇದಕರ, ಸದೃಢ ರಾಷ್ಚ್ರ ನಿರ್ಮಾಣ ದಿಸೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ, ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಬೇಕೆಂದು ಶಾಸಕ ಬಿ.ಬಿ. ರಾಮಸ್ವಾಮಿಗೌಡ ತಿಳಿಸಿದರು.
ಶನಿವಾರ, ಪಟ್ಟಣದ ಅತ್ಯಂತ ಹಳೇಯ ಪ್ರೌಢಶಾಲೆಯಾದ ಮಹಾತ್ಮಗಾಂಧಿ ಸರ್ಕಾರಿ ಪ.ಪೂ.ಕಾಲೇಜಿನ 2012-13ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ಯೋಜನೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭಾಧ್ಯಕ್ಷೆ ನಳಿನಾ ಭೈರಪ್ಪ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸ್ತೆವಹಿಸುವ ಮೂಲಕ ಪರಿಪೂರ್ಣವಿದ್ಯಾರ್ಥಿಜೀವನ ಸಾಧಿಸಬೇಕೆಂದರು. ವಿಶ್ರಾಂತ ಪ್ರಾಚಾರ್ಯ ರೇಣುಕಾಮೂರ್ತಿ, ಉಪನ್ಯಾಸಕ ಸುರೇಶ್ ಮಾತನಾಡಿ, ಕಾಲೇಜಿನ ಬೋಧಕ ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಇದ್ದರು.