ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ
ತುಮಕೂರು: ತುಮಕೂರು ಜಿಲ್ಲೆಯ ನೀರಾವರಿ, ನೀರಿನ ಸ್ಥಿತಿ -ಗತಿ ಕುರಿತು ತಾವು ವೈಮಾನಿಕ ಸಮೀಕ್ಷೆ ನಡೆಸಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಅವರು ಕೊರಟಗೆರೆಯಲ್ಲಿ ಏರ್ಪಾಟಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳು, ನಾಲೆಗಳಲ್ಲಿನ ನೀರಿನ ಪ್ರಮಾಣ ಕುರಿತು ವೈಮಾನಿಕ ಸಮೀಕ್ಷೆ ನಡೆಸಿರುವುದಾಗಿಯೂ, 800 ರಿಂದ 1000 ಅಡಿಗೆ ನೀರಿನ ಸೆಲೆ ಹೋಗಿರುವುದಾಗಿಯೂ ತಿಳಿಸಿದರು. ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಮೇ ಕೊನೆಯ ವೇಳೆಗೆ ಬೆಂಗಳೂರು ನೀರಿನ ಭೀಕರ ಬರಗಾಲ ಎದುರಿಸಲಿದೆ ಎಂದು ಎಚ್ಚರಿಸಿದರು.
ವೈಕೆಆರ್ ಉತ್ತರಾಧಿಕಾರಿ: ತಾವು ಕುಣಿಗಲ್ ಎಂಎಲ್ಎ ಆಗಿದ್ದ ವೈ.ಕೆ. ರಾಮಯ್ಯ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾಗಿಯೂ, ಆದರೆ ದೈವೇಚ್ಚೆ ಇರಲಿಲ್ಲ. ಆಗಿನ್ನೂ ತಮ್ಮ ಮಗ ಎಚ್.ಡಿ. ಕುಮಾರಸ್ವಾಮಿ ಓದುತ್ತಿದ್ದ. ಆದರೆ ತಮ್ಮನ್ನು ದೃತರಾಷ್ಟ್ರ, ಪುತ್ರಪ್ರೇಮಿ ಎಂದು ಟೀಕಿಸುತ್ತಿದ್ದಾರೆ ಎಂದರು.