ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯುವಕರಿಗೆ ಆದ್ಯತೆ ನೀಡಲು ನಿವೃತ್ತಿ

Mainashree
Updated On : 4 Feb 2013, 9:24 am

ಪಾವಗಡ: ಯುವಕರಿಗೆ ಆದ್ಯತೆ ಕಲ್ಪಿಸುವ ಹಿನ್ನೆಲೆ ಶಾಸಕ ಸ್ಥಾನದಿಂದ ತಾವು ನಿವೃತ್ತರಾಗಲಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ವರ್ಧಿಸಲಿರುವ ಎಚ್.ವಿ.ವೆಂಕಟೇಶ್ ಅವರನ್ನು ಬೆಂಬಲಿಸಿ ಎಂದು ಶಾಸಕ ವೆಂಕಟರಮಣಪ್ಪ ಮನವಿ ಮಾಡಿದರು. ಅವರು ಸೋಮವಾರ ತಾಲೂಕಿನ ವೈ.ಎನ್ ಹೊಸಕೋಟೆ ಪಟ್ಟಣದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಹೈಕಮಾಂಡ್ ತೀರ್ಮಾನಿಸಿದಂತೆ ಬರುವ ವಿಧಾನ ಚುನಾವಣೆಯಲ್ಲಿ ತಮ್ಮ ಪುತ್ರ ಎಚ್.ವಿ. ವೆಂಕಟೇಶ್ ಕಾಂಗ್ರೆಸ್‌ನಿಂದ ಸ್ವರ್ಧಿಸಲಿದ್ದು ಚುನಾವಣೆಯಲ್ಲಿ ವೆಂಕಟೇಶ್ ಅವರನ್ನು ಆಯ್ಕೆ ಮಾಡಿ ಎಂದರು.  ಬಿಜೆಪಿ ಹಾಗೂ ಜೆಡಿಎಸ್‌ನಿಂದ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಕ್ಕೆ ಸಂತಸವಾಗಿದೆ ಎಂದರು. ತಾಳೇಮರದಹಳ್ಳಿ ನರಸಿಂಹಯ್ಯ, ಜಂಪಯ್ಯ, ಚಿಕ್ಕನಾಗಪ್ಪ, ವಿ.ಎನ್ ಗೋಪಾಲರೆಡ್ಡಿ, ಮಾನಂ ವೆಂಕಟಸ್ವಾಮಿ, ಜಗನ್ನಾಥಪ್ಪ, ತಾಪಂ ಮಾಜಿ ಸದಸ್ಯ ಆನಂದ್ ಮುಂತಾದವರು ಮಾತನಾಡಿ ಕಾಂಗ್ರೆಸ್‌ನಿಂದ ಸ್ವರ್ಧಿಸಲಿರುವ ಎಚ್.ವಿ. ವೆಂಕಟೇಶ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement