ಆಧಾರ್ ಕಾರ್ಡ್ಯೋಜನೆ ಜಾಗೃತಿ ಪಾದಯಾತ್ರೆ
ಗುಬ್ಬಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳನನ್ನು ನೇರವಾಗಿ ಅರ್ಹ ಫಲಾನಭವಿಗಳಿಗೆ ತಲುಪಿಸುವಮಹತ್ತರ ಉದ್ದೇಶದಿಂದ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಿದ್ದು ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆದುಕೂಳ್ಳುವಂತೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಕರೆ ನೀಡಿದರು.
ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಿತಿವತಿಯಿಂದ ಏರ್ಪಡಿಸಿದ್ದ ಆಧಾರ್ ಕಾರ್ಡ್ಯೋಜನೆಯ ಜಾಗೃತಿ ಪಾದಯಾತ್ರೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರ ವಿಕೇಂದ್ರೀಕರಣದಡಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ ಸಮಾನ ಅಧಿಕಾರ ಮತ್ತು ನೇರ ಅನುದಾನ ಕಲ್ಪಿಸುವಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ ಕಾಂಗ್ರೆಸ್ ದೀನ,ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಸಮಾನತೆ ಕಲ್ಪಿಸುವಲ್ಲಿ ಕಾಂಗ್ರೆಸ್ ಮಹತ್ತರ ಸಾಧನೆ ಮಾಡಿದ್ದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಷ್ಟ ಬಹುಮತ ನೀಡವ ಮೂಲಕ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಭ್ರಷ್ಟಾಚಾರ: ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯದ ಕೋಮುವಾದಿ ಬಿಜೆಪಿ ಸರ್ಕಾರ ಬಹುಮತವಿಲ್ಲದೆ ಕೋಮಾವಸ್ತೆಯಲ್ಲಿದ್ದು ಇಂತಹ ಪರಿಸ್ಧಿತಿಯಲ್ಲಿ ರಾಜ್ಯದ ಜನತೆಗೆ ಯಾವ ರೀತಿಯ ಬಜೆಟ್ ನೀಡಲಿದೆ ಎಂದ ಅವರು ಇಡೀ ಸಚಿವ ಸಂಪುಟದಲ್ಲಿ ಭ್ರಷ್ಟರೇ ತುಂಬಿದ್ದು ರಾಜ್ಯದ ಜನತೆಗೆ ಎಷ್ಟರ ಮಟ್ಟಿಗೆ ಮೂಲಭೂತ ಸೌಲಭ್ಯ ಕಲಿಸುತ್ತದೆ ಎಂಬುದನ್ನು ಮತದಾರ ಬಂಧುಗಳು ಯೋಚಿಸಬೇಕಾಗುತ್ತದೆ ಎಂದರು.
ಮಾಜಿ ಸಚಿವ ಶಿವಮೂರ್ತಿ ಮಾತನಾಡಿ ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಭ್ರಷ್ಟ ಬಿಜೆಪಿ ಪಕ್ಷ ಕೋಮುವಾದದ ವಿಷಬೀಜ ಭಿತ್ತಿ ಇಡೀ ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆಡೆ ಮಾಡಿದೆ. ಬಿಜೆಪಿ ಪಕ್ಷವನ್ನು ರಾಜ್ಯದಿಂದ ಬೇರು ಸಮೇತ ಕಿತ್ತೂಗೆಯುವ ತನಕ ಈ ರಾಜ್ಯಕ್ಕೆ ನೆಮ್ಮದಿ ಇಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಷಫಿ ಅಹಮದ್, ಶಾಸಕ ಬಿ.ಸಿ. ಪಾಟೀಲ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ರಾಜಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ, ಕೆಪಿಸಿಸಿ ಸದಸ್ಯರಾದ ಕೆ.ಆರ್. ತಾತಯ್ಯ, ಟಿ.ಎಂ.ಗೌಡ, ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.