ಕೊರಟಗೆರೆ ತಾ. ಕೆಜೆಪಿ ಅಧ್ಯಕ್ಷರಾಗಿ ಪ್ರಭಾಕರ ಅಧಿಕಾರ ಸ್ವೀಕಾರ
ಕೊರಟಗೆರೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಕೆಜೆಪಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸೇರ್ಪಡೆಯಾಗಿರುವುದಾಗಿ ಅಗ್ರಹಾರ ಧರ್ಮಾತ್ಮ ಸಂಸ್ಥೆಯ ಮುಖ್ಯಸ್ಥ ಕೆ.ಎಸ್. ಪ್ರಭಾಕರ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾ ಕೆಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಅವರು ಪಕ್ಷದ ಕೊರಟಗೆರೆ ತಾಲೂಕಿನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪಕ್ಷದ ಸಂಘಟನೆಯೊಂದಿಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುವುದಗಿ ತಿಳಿಸಿದರು. ವಾಲೇ ಚಂದ್ರಯ್ಯ ಮಾತನಾಡಿ ಈ ಕ್ಷೇತ್ರ ಸಂಸದರಾದ ಜಿ.ಎಸ್. ಬಸವರಾಜು ಅವರು ತುಮಕೂರು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯಾದ ನೇತ್ರವತಿ ತಿರುವು ಯೋಜನೆಗೆ ಕ್ಯಾಬಿನೆಟ್ನಲ್ಲಿ 430 ಕೋಟಿ ರು.ಗಳ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದು ಕೊರಟಗೆರೆ ಕ್ಷೇತ್ರವು ಈ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು ಸಂಸದರೊಂದಿಗೆ ನಾನು ಹೋರಾಡಲು ಜನತೆ ಬೆಂಬಲ ನೀಡಬೇಕೆಂದರು. ಕೆಜೆಪಿ ಪಕ್ಷದ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಹೇಮಲತಾ, ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ, ಎಸ್.ಸಿ ಘಟಕದ ಅಧ್ಯಕ್ಷ ಆನಂದ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫಯೂಜ್ ಉಪಸ್ಥಿತರಿದ್ದರು.
ಪದಾಧಿಕಾರಿಗಳು: ತಾ. ಅಧ್ಯಕ್ಷರಾಗಿ ಪ್ರಭಾಕರ್, ಉಪಾಧ್ಯಕ್ಷರಾಗಿ ಲಂಕೇನಹಳ್ಳಿ ಮಲ್ಲಣ್ಣ, ಬ್ಯಾಲ್ಯ ಮಂಜನಾಥ್, ಬಂಡೆಪಾಳ್ಯ ಹನುಮಂತರಾಯಪ್ಪ, ಕಲ್ಲುಗುಟ್ಟರಹಳ್ಳಿ ವೆಂಕಟರವಣಪ್ಪ, ಕುರಂಕೋಟೆ ಸಿದ್ದರಾಜು, ಕೊರಟಗೆರೆ ಸಯದ್ ದಾವೂದ್, ಪ್ರಧಾನ ಕಾರ್ಯದರ್ಶಿಗಳಾಗಿ ಮಲುಗೋನಹಳ್ಳಿ ತೋಂಟಾರಾಧ್ಯ, ಲಕ್ಷ್ಮಣ, ಕಾರ್ಯದರ್ಶಿಯಾಗಿ ಬ್ರಹ್ಮಸಂದ್ರ ಗಂಗರಾಜು, ಮುದ್ದೇನ ಹಳ್ಳಿ ಜಗದೀಶ್, ಯಲದಡ್ಲು ಸಿದ್ದಲಿಂಗಪ್ಪ ನಾಯಕ್, ಯಾದಗೆರೆ ಬೀಮಾರ್ಜುನ, ಬೈರೇನಹಳ್ಳಿ ದೊಡ್ಡಯ್ಯ, ಮೆಡಿಕಲ್ ನಯಾಜ್, ಖಜಾಂಚಿಯಾಗಿ ಸೊರೇನಹಳ್ಳಿ ಮೋಹನ್ ಆಯ್ಕೆಯಾಗಿದ್ದಾರೆ