ಜಗತ್ತಿನಲ್ಲಿ ಇರುವುದು ಮನುಷ್ಯ ಜಾತಿ ಒಂದೇ: ಶಾಸಕ ಪ್ರಕಾಶ್
ಹಾಸನ: ನಾವೆಲ್ಲರೂ ಭಾರತೀಯರು, ಇಲ್ಲಿ ಯಾವ ಜಾತಿ ಇಲ್ಲ ಜಗತ್ತಿನಲ್ಲಿ ಇರುವುದುಒಂದೇ, ಅದು ಮನುಷ್ಯ ಜಾತಿ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ತಾಲೂಕಿನ ಅಗಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಯುವಜನತೆ ಪಾತ್ರ ಮುಖ್ಯವಾಗಿದ್ದು, ಅದು ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮೂಲಕ ಗ್ರಾಮಗಳಲ್ಲಿ ನೈರ್ಮಲ್ಯ, ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಸಲಹೆ ನೀಡಿದರು.ಮೊಗಣ್ಣಗೌಡ ಮಾತನಾಡಿ, ಯುವಜನರು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಜನಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು. ಶಿಬಿರಾಧಿಕಾರಿ ಬಿ.ಆರ್. ಉಮೇಶ್ ಮಾತನಾಡಿ, ಗಾಂಧೀಜಿ ಕನಸಿನ ಕೂಸು ಈ ರಾಷ್ಟ್ರೀಯ ಸೇವಾ ಯೋಜನೆ. ಯುವಶಕ್ತಿಯ ಒಗ್ಗೂಡಿವಿಕೆಗೆ ಈ ಯೋಜನೆ ಸಹಕಾರಿ ಎಂದರು.