120 ಮಂದಿಗೆ ನೇತ್ರ ಚಿಕಿತ್ಸೆ
ಶಿರಾ: ತಾಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.
ಜಯಕರ್ನಾಟಕ ಮಹಿಳಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಸದರಿ ಶಿಬಿರದಲ್ಲಿ 270 ಜನ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 120 ಮಂದಿಗೆ ಉಚಿತವಾಗಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿಕೊಡಲಾಯಿತು.
ಶಿಬಿರದಲ್ಲಿ ಜಯಕರ್ನಾಟಕ ನಗರ ಘಟಕದ ಅಧ್ಯಕ್ಷ ಉಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಎಚ್.ಕೆ. ರಾಜಮ್ಮ, ಗೌರವ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಮೀನಾಕ್ಷಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಕಲಾವತಮ್ಮ, ಖಜಾಂಚಿ ವನಜಾಕ್ಷಿ, ಕಾರ್ಯದರ್ಶಿ ಲೀಲಾವತಿ, ಸಂಚಾಲಕರಾದ ಮಂಜುಳ, ಡಿ.ಎಚ್. ಈರಮ್ಮ, ಅತಾವುಲ್ಲ, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.