ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿನ್ನಾಭರಣ ವಂಚನೆ: ಇಬ್ಬರ ಬಂಧನ

Rashmi Kasaragodu
Updated On : 6 Feb 2013, 11:43 am


ಶಿರಾ:  ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಜನರನ್ನು ವಂಚಿಸಿ ಅಸಲಿ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪದ ಮೇಲೆ ನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಮಾರುತಿ, ಸಂತೇ ಬೆನ್ನೂರು ಗ್ರಾಮದ ಹನುಮಕ್ಕ ಬಂಧಿತ ಆರೋಪಿಗಳು. ಪ್ರತಿ ಮಂಗಳವಾರ ನಗರದಲ್ಲಿ ಸಂತೆ ವಹಿವಾಟು ನಡೆಯುತ್ತದೆ. ಅಪಾರ ಜನಸಂಖ್ಯೆಯಲ್ಲಿ ಜನರು ಸಂತೆ ವ್ಯಾಪಾರಕ್ಕೆ ತರಕಾರಿ ಅಂಗಡಿ ದಿನಸಿ ಕೊಳ್ಳಲು ಹಳ್ಳಿಗಳಿಂದ ಆಗಮಿಸುತ್ತಾರೆ. ಇಂಥ ದಿನಗಳನ್ನೇ ಅಕ್ರಮ ಎಸಗಲು ಹಲವರು ತಿಂಗಳುಗಳಿಂದ ಹೊಂಚು ಹಾಕುತ್ತಾರೆ.  ಜನಸಾಮಾನ್ಯರನ್ನು ಯಾಮಾರಿಸಿ ಅಸಲಿ ವಡವೆಗಳೊಂದಿಗೆ ಪರಾರಿಯಾಗುತ್ತಿದ್ದ ಇಂಥ ಪ್ರಕರಣಗಳ ಬಗ್ಗೆ ನಗರ ಠಾಣಾ ಪಿಎಸ್ಐ ಪ್ರಹ್ಲಾದ್ ಹಾಗೂ ಪಿಎಸ್ಐ ಕೃಷ್ಣಕುಮಾರ್ ತನಿಖೆ ಆರಂಭಿಸಿದ್ದರು.
ಬಂಧಿತರಿಂದ 105 ಗ್ರಾಂ ತೂಕದ 3.15 ಲಕ್ಷ ಬೆಲೆ ಬಾಳುವ ವಡವೆ ವಶಪಡಿಸಿಕೊಂಡಿದ್ದಾರೆ. ಸದರಿ ಪ್ರಕರಣದಲ್ಲಿ ಶಾಮೀಲಾದ ಇನ್ನೂ ಕೆಲವರನ್ನು ಬಂಧಿಸುವ ಬಗ್ಗೆ ಠಾಣಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement