ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಠಾನಕ್ಕೆ 25000 ಕೋಟಿ ಮೀಸಲಿಡಿ: ಶೆಟ್ಟರ್‌ಗೆ ಮನವಿ

Mainashree
Updated On : 7 Feb 2013, 10:12 am

ಮಧುಗಿರಿ:  ತಾಲೂಕು ಸೇರಿದಂತೆ ರಾಜ್ಯದ ಬಯಲುಸೀಮೆ ಪ್ರದೇಶದ 9 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಠಾನಕ್ಕಾಗಿ ಈ ಸಲ ಮಂಡಿಸಲಿರುವ ಬಜೆಟ್‌ನಲ್ಲಿ 25000 ಕೋಟಿ ಮೀಸಲಿಡುವಂತೆ ಮತ್ತು ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಜೆಡಿಎಸ್ ಮುಖಂಡ ಬಿ.ಎನ್. ಶಿವಣ್ಣ ನೇತೃತ್ವದಲ್ಲಿ ಮಧುಗಿರಿ ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬೃಹತ್ ನೀರಾವರಿ ಸಚಿವ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.
ಈ ಮಹತ್ವದ ಯೋಜನೆಯಿಂದ ಮಧುಗಿರಿ ತಾಲೂಕಿಗೆ 12 ಟಿಎಂಸಿ ನೀರು ಹರಿಯಲಿದೆ. ರೈತ ಸಮುದಾಯಕ್ಕೆ ವರದಾನವಾಗಲಿದೆ. ಇದರ ಜೊತೆಗೆ ಒಟ್ಟು 18 ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿ.ಎನ್.ಶಿವಣ್ಣ ನೀಡಿದರು.
ಈ ಸಂದರ್ಭ ಮಧುಗಿರಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ರಾಜಶೇಖರ್, ಮಾಜಿ ಅಧ್ಯಕ್ಷ ಸಿ.ಎಂ. ವೀರಣ್ಣ, ತಾ.ಪಂ. ಸದಸ್ಯ ಡಾ.ಮಧು, ಚನ್ನಲಿಂಗಪ್ಪ, ತಾಲೂಕು ಯುವ ಜೆಡಿಎಸ್ಕಾರ್ಯಾಧ್ಯಕ್ಷ ಎಸ್.ಮೋಹನ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement