ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬುಲ್‌ಬುಲ್ ಮೇಳ ಇಂದು (ಸುದ್ದಿ ಸಂಕ್ಷೇಪ)

Mainashree
Updated On : 7 Feb 2013, 10:07 am

ಹುಳಿಯಾರು:  ಚಿಕ್ಕನಾಯಕನಹಳ್ಳಿ ತಾಲೂಕು ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಚಿಕ್ಕನಾಯಕನಹಳ್ಳಿ ಸ್ಕೌಟ್ಸ್ ಅಂಡ್ ಗೈಡ್ಸ್ ಕ್ಲಬ್ ಮತ್ತು ಬುಲ್ ಬುಲ್ ಮೇಳ 8ರಿಂದ ನಡೆಯಲಿದೆ. ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ತಿಮ್ಮಯ್ಯ ಉದ್ಘಾಟಿಸಲಿರುವ ಮೇಳದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ಅಧ್ಯಕ್ಷತೆ ವಹಿಸಲಿದ್ದು, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಆರ್. ಲಕ್ಷ್ಮಿಕಾಂತ್ ರಾಷ್ಟ್ರ ಧ್ವಜಾರೋಹಣ, ಚಿ.ನಾ.ಹಳ್ಳಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿ ರಾಮಣ್ಣ ಸ್ಕೌಟ್ಸ್ ಧ್ವಜಾರೋಹಣ ನೆರವೇರಿಸುವರು.ಪಿಎಸೈ ಟಿ.ವಿ. ರಾಜು ಪಥ ಸಂಚಲನಕ್ಕೆ ಚಾಲನೆ ನೀಡುವರು. ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಮಾಜಿ ಉಪಾಧ್ಯಕ್ಷೆ ಬೀಬಿ ಫಾತೀಮಾ, ತಹಸೀಲ್ದಾರ್ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್, ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ರಾಮಾಂಜನೇಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ, ಅಕ್ಷರ ದಾಸೋಹದ ತಿಮ್ಮರಾಜು, ದೈಹಿಕ ಶಿಕ್ಷಣ ಅಧೀಕ್ಷಕ ನರಸಿಂಹಮೂರ್ತಿ ಸೇರಿದಂತೆ ಇತರರು ಅತಿಥಿಗಳಾಗಿ ಆಗಮಿಸುವರು.
ಎನ್‌ಎಸ್‌ಎಸ್ ಶಿಬಿರ ಇಂದಿನಿಂದ
ತಿಪಟೂರು:  ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಕನ್ನೂಘಟ್ಟ ಮತ್ತು ಮಜರೆ ಗೊಲ್ಲರಹಟ್ಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಫೆ.8ರಿಂದ ಫೆ. 14 ರವರೆಗೆ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಗುರುಕುಲಾನಂದಾಶ್ರಮದ  ಕರಿಬಸವ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸುವರು. ಅಧ್ಯಕ್ಷತೆ ಕೆ.ವಿ.ಎಸ್. ಅಧ್ಯಕ್ಷ ಎನ್.ಬಸವಯ್ಯ ವಹಿಸಲಿದ್ದಾರೆ. ಪಿ.ಎ. ಪ್ರಾಂಶುಪಾಲರಾದ ಸೈಯದ್ ಮುಷ್ತಾಕ್ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ವಾಗ್ಮಿಗಳಾದ ತ.ಬ. ಬಸವಮೂರ್ತಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಸಂಯೋಜಕ ಡಾ. ಎಂ.ಕೊಟ್ರೇಶ್, ಕೆ.ವಿ.ಎಸ್. ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಜಯರಾಮುಗೆ ರಾಷ್ಟ್ರ ಪ್ರಶಸ್ತಿ
ತುಮಕೂರು:  ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಯರಾಮು ಅವರು ಇಂಡಿಯನ್ ಲೀಡರ್‌ಶಿಪ್ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement