ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೆಂಕಟೇಶ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿ: ಈಶ್ವರ್

Mainashree
Updated On : 7 Feb 2013, 10:13 am

ಪಾವಗಡ:  ಕಾಂಗ್ರೆಸ್ ಪಕ್ಷ ಈಗಾಗಲೇ ತಾಲೂಕಿನಲ್ಲಿ ಪ್ರಬಲ ಸಂಘಟನೆಯಲ್ಲಿ ತೊಡಗಿದ್ದು ಯುವ ಮುಖಂಡ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಚ್.ವಿ.ವೆಂಕಟೇಶ್ ಅವರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಯುವ ಮುಖಂಡ ಜಿ.ಎಚ್. ಈಶ್ವರ್ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಕಾಂಗ್ರೆಸ್ ಪ್ರಬಲವಾಗಿದೆ.  ಪಕ್ಷ ಬಲವರ್ಧನೆಗೆ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಯುವ ನೇತಾರ ಎಚ್.ವಿ. ವೆಂಕಟೇಶ್ ಹಾಗೂ ಆನೇಕ ಮಂದಿ ಬೆಂಬಲಿಗರ ಪರಿಶ್ರಮವಿದೆ. ಈ ಹಿನ್ನಲೆಯಲ್ಲಿ ವೆಂಕಟೇಶ್ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ಸಾಧ್ಯ ಎಂದರು.
ಯುವ ಮುಖಂಡರಾದ ಬಸವರಾಜ್, ಕೃಷ್ಣಾರೆಡ್ಡಿ, ವಿ.ಎಲ್. ಶ್ರೀನಾಥ್, ಜಗನ್ನಾಥ್ ರೆಡ್ಡಿ, ಭಾಸ್ಕರ್ ಚಕ್ರೀನಾಯ್ಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement