'ಸಮಸ್ಯೆ ಪರಿಹಾರಕ್ಕೆ ಜೆಡಿಎಸ್ ಬೆಂಬಲಿಸಿ'
ಪಾವಗಡ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಡಿತರ ಚೀಟಿ, ವಿದ್ಯುತ್, ನಿರ್ಗತಿಕರ ಮಾಸಾಶನ ಸೇರಿದಂತೆ ತಾ, ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬದ್ಧರಾಗುವುದಾಗಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಿಳಿಸಿದರು.
ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಡು ಬಡವರ ಮನೆ ಮಂಜೂರಾತಿ, ಪಡಿತರ ವಂಚನೆ ಮಾಸಶನ ಬಿಡುಗಡೆ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಆಗಿರುವ ಆನ್ಯಾಯ ನಿವಾರಣೆ ಆಗಬೇಕಾದರೆ ಜೆಡಿಎಸ್ನಿಂದ ಮಾತ್ರ ಸಾಧ್ಯ. ತಾಲೂಕು ಜೆಡಿಎಸ್ ಆಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವಹಿಸಬೇಕಿದೆ ಎಂದರು.
ಅಂಗವಿಕಲರು, ವೃದ್ಧರು, ವಿಧವೆ ಮುಂತಾದ ನಿರ್ಗತಿಕರ ಮಾಸಾಶನ ಮಂಜೂರು ಕುಡಿಯುವ ನೀರು ವಿದ್ಯುತ್ ಸಮಸ್ಯೆ ಸೇರಿದಂತೆ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಡಬೇಕಿದ್ದ ಶಾಸಕ ವಂಕಟಮಣಪ್ಪ ಸ್ವಾರ್ಥ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಖಾತ್ರಿ ಯೋಜನೆ ದುರುಪಯೋಗವಾಗವಾಗಿರುವುದಲ್ಲದೆ ಈ ಯೋಜನೆಯಿಂದ ಯಾವುದೇ ರೈತಾಪಿಗಳಿಗಾಗಲಿ ಅಥವಾ ಕೂಲಿಕಾರರಿಗೆ ಅನುಕೂಲವಾಗಲಿಲ್ಲ ಭೀಕರ ಪರಿಸ್ಥಿತಿ ನಿವಾರಣೆಯಲ್ಲಿ ಶಾಸಕರು ವಿಫಲರಾದ ಕಾರಣ ಇಂದು ಬಹುತೇಕ ರೈತರು ಕೂಲಿಕಾರರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಜೀವನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಅವಧಿಯಲ್ಲಿ 15 ಗುಡಿಸಲು ರಹಿತ ಅನುಷ್ಟಾನ ಸೇರಿದಂತೆ ಸರ್ಕಾರಿ ಬಸ್ ಡಿಪೋ ರೈತರಿಗೆ ಅನುಕೂಲ ಆಗುವಂತಹ ರಿಯಾಯಿತಿ ದರದ ನೆಲೆಗಡಲೇ ಬಿತ್ತನೆ ಬೀಜ ವಿತರಣೆ 8 ಸರ್ಕಾರಿ ಪ್ರೌಢಶಾಲೆಗಳು, 2 ಪಿಯು ಕಾಲೇಜ್ಗಳು ಬಡವರ ಮನೆಗಳಿಗೆ ಭಾಗ್ಯಜ್ಯೋತಿ ಅಗ್ನಿಶಾಮಕ ದಳದ ಕಚೇರಿ ಸೇರಿದಂತೆ ಗಡಿ ಗ್ರಾಮಗಳ ರಸ್ತೆ ಅಭಿವೃದ್ಧಿಗಳಿಗೆ ಒತ್ತು ನೀಡಿರುವುದಾಗಿ ತಿಳಿಸಿದರು.
ಪಕ್ಷಕ್ಕೆ ಸೇರ್ಪಡೆಯಾದ ಮುಖಂಡನ್ನು ಸ್ವಾಗತಿಸಿ ಗ್ರಾಮವಾಸ್ಯವ್ಯ ಮಾಡುವ ಮೂಲಕ ಮಾದರಿಯಾದ ಜನಪರ ಕಾಳಜಿಯುಳ್ಳ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಾರಿಯಾಗಲು ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಪಕ್ಷದ ಹಿರಿಯ ಮುಖಂಡ ಆರ್.ಸಿ. ಅಂಜಿನಪ್ಪ ಮಾತನಾಡಿ, ತಾಲೂಕು ಕೋಟಿಗಟ್ಟಲೆ ಅನುದಾನದಿಂದ ಅಭಿವೃದ್ಧಿಯಾಗಿದೆ ಎಂದು ಹೇಳುವ ಶಾಸಕ ತಮ್ಮ ಮಗನಿಗೆ ಕಾಮಗಾರಿಗಳು ಗುತ್ತಿಗೆ ಕೊಡಿಸುವ ಮೂಲಕ ಹಣ ಲಪಟಾಯಿಸಿದ್ದಾರೆ. ಅಕ್ರಮದ ಹಣದಿಂದ ಮಗ ವೆಂಕಟೇಶ್ ಕಾರ್ಯಕರ್ತರಿಗೆ ಅಮಿಷ್ಯವೊಡ್ಡಿ ದುಂದು ವೆಚ್ಚದಲ್ಲಿ ನಿರತರಾಗಿದ್ದಾರೆ. ಇವರಿಗೆ ತಾಲೂಕಿನಲ್ಲಿ ಭವಿಷ್ಯವಿಲ್ಲ. ತಾಲೂಕು ಜೆಡಿಎಸ್ ಭದ್ರಕೋಟೆಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಎನ್.ತಿಮ್ಮಾರೆಡ್ಡಿ, ಜಿಪಂ ಸದಸ್ಯ ಎಂ.ಕೆ. ನಾರಾಯಣಪ್ಪ ಮುಂತಾದವರು ಕಾಂಗ್ರೆಸ್ ಹಾಗೂ ಶಾಸಕ ವೆಂಕಟರಮಣಪ್ಪನ ವೈಖರಿ ಬಗ್ಗೆ ಲೇವಡಿ ಮಾಡಿದರು.
ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು ಮುಖಂಡರಾದ ಎಸ್.ಕೆ. ರೆಡ್ಡಿ, ಎಸ್.ವಿ. ಗೋವಿಂದಪ್ಪ ಪ್ರಸಾದ್ರೆಡ್ಡಿ, ವಿ.ಚಿಂತಲರೆಡ್ಡಿ, ಕೆ.ಆರ್.ಸುರೇಶ್, ತಿರುಮಣಿ ಎಸ್.ನಾರಾಯಣಪ್ಪ, ಕೆ.ಎನ್. ರಾಮಕೃಷ್ಣರೆಡ್ಡಿ, ಅಕ್ಕಲಪ್ಪನಾಯ್ಡು, ಬಲರಾಮರೆಡ್ಡಿ, ಡಾ.ಕಿರಣ್, ತಿಪ್ಪಗಾನಹಳ್ಳಿ ಈಶ್ವರಪ್ಪ ಎನ್.ವಿ. ಈರಣ್ಣ,ಬ್ರಹ್ಮಾನಂದ ರೆಡ್ಡಿ, ರಾಜ್ಗೋಪಾಲ್ ಮುಂತಾದ ಮುಖಂಡರಿದ್ದರು.