ಇಂದು ಕವಿಗೋಷ್ಠಿ (ಸುದ್ದಿ ಸಂಕ್ಷೇಪ)
ತುಮಕೂರು:ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜ. 10 ರಂದು ಬೆಳಗ್ಗೆ 10.30 ಕ್ಕೆ ಕರಾಟೆ ಪ್ರಾತ್ಯಕ್ಷಿಕೆ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದೆ. ಸಾನಿಧ್ಯವನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ. ಬ್ಲಾಕ್ ಬೆಲ್ಟ್ ವಿಜಯಲಕ್ಷ್ಮೀ ಅವರು ಕರಾಟೆ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಎಚ್. ಕಮಲಾ ಬಡ್ಡಿಹಳ್ಳಿ ವಹಿಸಲಿದ್ದಾರೆ. ಪಾವಗಡ ಸಣ್ಣರಂಗಮ್ಮ ಹಾಗೂ ಬಿಂಬಕುಮಾರ್ ಆಗಮಿಸಲಿದ್ದಾರೆ.
ಇಂದು ಆರೋಗ್ಯ ತಪಾಸಣಾ ಶಿಬಿರ
ಹುಳಿಯಾರು: ಹೋಬಳಿ ದಸೂಡಿ ಗ್ರಾಮದ ಸರ್ಕಾರಿ ಪ್ರೌ ಢಶಾಲಾ ಆವರಣದಲ್ಲಿ ಮೈತ್ರೇಯ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರ ಭಾನುವಾರ ಆರಂಭಗೊಳ್ಳಲಿದೆ.