ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

5 ದಿನಗಳ ಕಾಲ ಗ್ರಾಮೀಣ ನಾಟಕೋತ್ಸವ

Rashmi Kasaragodu
Updated On : 10 Feb 2013, 11:26 am

ಕೊರಟಗೆರೆ: ತಾಲೂಕಿನ ಕ್ಯಾಮೇನಹಳ್ಳಿ ಶ್ರೀ ಆಂಜನೆಯಸ್ವಾಮ ಸನ್ನಿಧಿಯಲ್ಲಿ ಫೆ.13 ರಿಂದ 17 ವರೆಗೆ 5 ದಿನಗಳ ಕಾಲ ಗ್ರಾಮೀಣ ನಾಟಕೋತ್ಸವ ಹಾಗೂ ರಂಗಗೀತೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕಲಾ ತಂಡಗಳು ನೋಂದಾಯಿಸಿಕೊಳ್ಳವಂತೆ ರಾಜೋತ್ಸವ ಪ್ರಶಸ್ತಿ ವಿಜೇತ ಹಾಗೂ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಮೈಲಾರಪ್ಪ ತಿಳಿಸಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಆವರಣದಲ್ಲಿ ಪ್ರತಿ ನಿತ್ಯ ಸಂಜೆ ರಂಗಗೀತೋತ್ಸವ, ಜಾನಪದ ಗೀತೆ, ಚಿತ್ರಗೀತೆ, ಭಾವಗೀತೆ, ರಂಗೋಲಿಸ್ಪರ್ಧೆ, ಸೋಬಾನಪದ, ವಿಚಾರ ಸಂಕಿರಣಗಳೊಂದಿಗೆ ಪಾದಕ ಪಟ್ಟಾಭಿಕ್ಷೇಕ, ರಾಮಂಜನೇಯ ಸಮಾಗಮ, ಶಿವಜಲಂಧರ, ಮಾರುತಿ ವಿಜಯ ಸೇರಿದಂತೆ ಇನ್ನಿತರ ಐತಿಹಾಸಿ ಮತ್ತು ಪೌರಾಣಿಕ ನಾಟಕಗಳನ್ನು ಏರ್ಪಡಿಸಲಾಗಿದೆ.
ಗ್ರಾಮೀಣ ಕಲಾವಿದರು ಈ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಕಲಾತಂಡದೊಂದಿಗೆ ಭಾಗವಹಿಸುವಂತೆ ಕೋರಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೀಡಿರುವ ಬಜೆಟ್ನಲ್ಲಿ ಗ್ರಾಮೀಣ ಅಸಕ್ತ ಕಲಾವಿದರಿಗೆ ಯಾವುದೇ ಸೌಲಭ್ಯ ನೀಡದೆ ಅನ್ಯಾಯ ಮಾಡಿದ್ದು ಮುಖ್ಯಮಂತ್ರಿಗಳು ತಕ್ಷಣ ಗಮನ ಹರಿಸಿ ಗ್ರಾಮೀಣ ಅಸಕ್ತ ಕಲಾವಿದರಿಗೆ ಸರ್ಕಾರ ನೀಡುತ್ತಿರುವ 1  ಸಾವಿರ ರು. ಮಾಸಾಶನವನ್ನು 3 ಸಾವಿರ ರು. ಗಳಿಗೆ ಹೆಚ್ಚಿಸಬೇಕು ಹಾಗೂ ಕಲಾವಿದರ ಮಾಶಸನ ಪಡೆಯುವ ವಯಸ್ಸಿನ ಮಿತಿಯನ್ನು 50 ವರ್ಷಗಳಿಗೆ ಇಳಿಸಬೇಕು ಎಂದು ಆಗ್ರಹಿಸಿದರು.
ತಕ್ಷಣ ಕಲಾವಿದರ ಮಾಶಾಸನ ಹೆಚ್ಚಿಸುವಂತೆ ಒತ್ತಾಯಿಸಿದ ಅವರು, ತಪ್ಪಿದಲ್ಲಿ ಶೀಘ್ರವೆ ರಾಜ್ಯ ಮಟ್ಟದಲ್ಲಿ ಅಸಕ್ತ ಕಲಾವಿದರೊಂದಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಬಿ.ಟಿ.ರಂಗಣ್ಣ, ಕಾರ್ಯದರ್ಶಿ ಹೆಚ್.ಎಸ್.ಮಾರುತಿ, ಹನುಮಂತರಾಜು, ರಂಗನಾಥ್, ವೈ.ಎನ್. ಪುಟ್ಟಣ್ಣ, ಹಳ್ಳಿರಂಗಯ್ಯ ಸೇರದಂತೆ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement