ಪ್ರಶ್ನೆ ಪತ್ರಿಕೆ ಬಹಿರಂಗ: 3 ಆರೋಪಿಗಳ ಬಂಧನ
ತುಮಕೂರು: ತುಮಕೂರು ವಿವಿಯ ವಿವಿಧ ಪದವಿ ಪತ್ರಿಕೆಗಳ ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಕಾವಲುಗಾರ ಭೀಮಸಂದ್ರದ ಬ್ರಹ್ಮಯ್ಯ (26), ತುಮಕೂರಿನ ಮೆಳೆಕೋಟೆ ರಸ್ತೆಯಲ್ಲಿರುವ ದಾನ- ಪ್ಯಾಲೇಸ್ ಹಿಂಭಾಗದಲ್ಲಿರುವ ಬಿಕಾಂ ವಿದ್ಯಾರ್ಥಿ ಶೇಖ್ ಜಾವಿದ್, ತುಮಕೂರಿನ ಮಧುಗಿರಿ ತಾಲೂಕು ಚೀಲನಹಳ್ಳಿಯ ಮಂಜುನಾಥ್ (26) ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಎಸ್ಪಿ ರಮಣಗುಪ್ತ, ತುಮಕೂರಿನ ವಿದ್ಯೋದಯ ಪ್ರಥಮ ದರ್ಜೆ ಕಾಲೇಜ್ನಲ್ಲಿ ಬಿಬಿಎಂ, ಬಿಕಾಂ ಹಾಗೂ ಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿದ್ದವು. ಈ ಹಿನ್ನೆಲೆಯಲ್ಲಿ ತುಮಕೂರು ವಿವಿ ಕುಲಸಚಿವ (ಪರೀಕ್ಷಾಂಗ) ಎನ್. ಲಕ್ಷ್ಮೀಕಾಂತ್ ತಿಲಕ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ವಿವಿ ಕೂಡ ತಪ್ಪಿತಸ್ಥ: ಈ ಪ್ರಕರಣದಿಂದ ತುಮಕೂರು ವಿವಿ ಕೂಡ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವ ಮುಜುಗರದ ಸನ್ನಿವೇಶ ನಿರ್ಮಾಣಗೊಂಡಿದೆ. ಒಂದೇ ಬಾರಿಗೆ 15 ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ದಿನಾಂಕಕ್ಕಿಂತ ಒಂದು ವಾರಕ್ಕಿಂತಲೂ ಮುಂಚಿತವಾಗಿ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿಗೆ ಪೂರೈಸಿ, ಕಾನೂನು ಉಲ್ಲಂಘಿಸಿದ ಇಕ್ಕಟ್ಟಿಗೆ ಸಿಲುಕಿದೆ.