ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಚಲನಚಿತ್ರಗಳಲ್ಲಿ ಹಿಂಸೆ ಛಾಯೆ ಅತಿ'

Mainashree
Updated On : 11 Feb 2013, 10:31 am

ತಿಪಟೂರು: ಚಲಚಿತ್ರ ಉದ್ಯಮವು ವ್ಯಾಪಾರಕ್ಕೆ ಹೆಚ್ಚಿನ ಮಹತ್ವಕೊಟ್ಟಿದ್ದು, ಗಲ್ಲಾಪೆಟ್ಟಿಗೆ ಮೇಲೆ ಗಮನವಿಟ್ಟು ಜನರಿಗೆ ಕೀಳು ಅಭಿರುಚಿಯ ಚಿತ್ರ ತೋರಿಸುವ ತಾಣವಾಗಿದೆ ಎಂದು ಕವಿ, ವಿಮರ್ಶಕ ಮತ್ತು ಕಲಾವಿದ ಎಲ್.ಎನ್. ಮುಕುಂದರಾಜ್ ವಿಷಾದಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಸಿನಿಮಾ ನೋಡುವ ಕ್ರಮ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಮತ್ತು ಇತರ ಬಹುತೇಕ ಭಾರತೀಯ ಭಾಷೆಗಳ ಚಲನಚಿತ್ರಗಳು ಹಿಂಸೆಯಿಂದ ಕೂಡಿವೆ. ಅವು ಹಿಂಸೆಯನ್ನು ವಿಜೃಂಭಿಸಿ ಜನರ ಚಪ್ಪಾಳೆ ಗಿಟ್ಟಿಸಿ ಅವರ ಅಭಿರುಚಿಯನ್ನು ಹಾಳು ಮಾಡಿವೆ. ಅಪರೂಪಕ್ಕೆ ಸಾಮಾಜಿಕ ಕಾಳಜಿಯಿಂದ ಬಿಡುಗಡೆಯಾದ ಚಲನಚಿತ್ರಗಳನ್ನು ನೋಡುವ ವಾತಾವರಣವು ಇಲ್ಲದಾಗಿದೆ. ಧಾರವಾಹಿಗಳು ಕೂಡ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಮತ್ತು ಭ್ರಮಾಲೋಕವನ್ನು ಸೃಷ್ಟಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಕ್ಷ್ಯಚಿತ್ರಗಳೇ ಸ್ವಲ್ಪ ಮಟ್ಟಿಗೆ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಫಲವಾಗಿವೆ ಎಂದರು.
ವಿಚಾರಸಂಕಿರಣ: ಕೆಐಟಿ ಪ್ರಾಂಶುಪಾಲ ಡಾ.ಎಸ್.ಎಂ. ಶಶಿಧರ್ ಮಾತನಾಡಿ ಕಲ್ಪತರು ನಾಡಿನ ಹೆಮ್ಮೆಯ ಕಲ್ಪತರು ವಿದ್ಯಾಸಂಸ್ಥೆಯು ತನ್ನ ಸುವರ್ಣ ಮಹೋತ್ಸವದ ಆಚರಣೆ ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಸುವರ್ಣ ಮಹೋತ್ಸವವು ಫೆ. 26, 27, 28ರಂದು ಮೂರು ದಿನಗಳು ನಡೆಯಲಿದ್ದು, ಸಮಾರಂಭಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ರಾಜಕಾರಣಿಗಳು, ಗಣ್ಯರು ಆಗಮಿಸಲಿದ್ದು, ಮಹೋತ್ಸವದ ಅಂಗವಾಗಿ ಅನೇಕ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಸಂಸ್ಥೆಯು ಹಮ್ಮಿಕೊಂಡಿದೆ ಎಂದರು.  ಮಹೋತ್ಸವ ಅಂಗವಾಗಿ ಮಂಗಳೂರಿನ ನಾಯಕತ್ವ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾಲೇಜಿನ ನಿರ್ದೇಶಕರಾದ  ಪ್ರೊ. ಸನ್ನಿತಾರಪ್ಪನ್ ಮೂರು ದಿನಗಳ ಕಾರ್ಯಾಗಾರವನ್ನು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಾಪಕರುಗಳಿಗಾಗಿ ನಡೆಸಿಕೊಟ್ಟರು.
ನಟರಾಜ್ ಹೊನ್ನವಳ್ಳಿ, ಡಾ.ಸಿದ್ದಗಂಗಯ್ಯ ಹೊಲತಾಳ್, ಡಾ.ನಟರಾಜ ಹುಳಿಯಾರ್, ಪ್ರೊ. ಪ್ರಸಾದಿ, ರಾಮಚಂದ್ರರಾವ್, ಪ್ರೊ. ವನಿತಾ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement