ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಾಲಯೇಸುವಿನ ಮೆರವಣಿಗೆ (ಸುದ್ದಿ ಸಂಕ್ಷೇಪ)

Mainashree
Updated On : 11 Feb 2013, 11:05 am

ತುರುವೇಕೆರೆ: ಇಲ್ಲಿಯ ಕ್ರೈಸ್ತ ಸಮುದಾಯದ ನೂರಾರು ಭಕ್ತರು ಬಾಲ ಏಸುವಿನ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರದ್ಧೆಯಿಂದ ನೆರವೇರಿಸಿದರು.  ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿರುವ ಚರ್ಚ್‌ನ 13 ನೇ ವಾರ್ಷಿಕೋತ್ಸವದ ಅಂಗವಾಗಿ ಬಾಲ ಏಸು ಕ್ರಿಸ್ತರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ದಾರಿಯುದ್ದಕ್ಕೂ ಪ್ರಾರ್ಥನೆ ನೆರವೇರಿಸಿದರು. ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಒಂದನೇ ಫಾದರ್ ಬೆಲಡಿಕ್ಟ್ ಅವರು ಕ್ರೈಸ್ತ ಭಾಂಧವರಿಗೆ ಹಿತಬೋಧನೆ ಮಾಡಿದರು. ಕೆಜೆಪಿ ಮುಖಂಡ ಮಸಾಲಾ ಜಯರಾಂ, ಕಾಳಂಜೀಹಳ್ಳಿ ಸೋಮಶೇಖರ್, ಕ್ರೈಸ್ತ ಸಮುದಾಯದ ಮುಖಂಡರಾದ ಸೇಂಟ್ ಲಿಟ್ಲ್ ಫ್ಲವರ್ ಸಂಸ್ಥೆಯ ಅಧ್ಯಕ್ಷ ಜಿ. ಫ್ರಾನ್ಸಿಸ್, ಸಗಾಯಿ ರಾಜು, ಬೆಂಜಿಮನ್ ಪಾಲ್, ಟಿ.ಎಂ.ನಾಗರಾಜು ಹಾಗೂ ವಿಕ್ಟರ್ ರಾಜು ರವರು ಪಾಲ್ಗೊಂಡಿದ್ದರು.
ಇಂದು ವಾಸವಿ ಆತ್ಮಾರ್ಪಣಾ ದಿನಾಚರಣೆ
ತುಮಕೂರು: ಇಲ್ಲಿನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.12 ರಂದು ವಾಸವಿ ಆತ್ಮಾರ್ಪಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ವಾಸವಿ ಮಾತೆಯ ಅಗ್ನಿ ಪ್ರವೇಶದ ಅಂಗವಾಗಿ ಈ  ಆತ್ಮಾರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ಸುಪ್ರಭಾತ, ಪುಣ್ಯಾಹ ಗಣಪತಿ ಪೂಜೆ, ಅಮ್ಮನವರಿಗೆ ಪಂಚಾಮೃತಾಭಿಷೇಕ, ಗಣಪತಿ ಹೋಮ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮವಿದೆ.
ರೋಗಿಗಳು ಖಾಸಗಿ ಆಸ್ಪತ್ರೆಗೆ ಶಿಫ್ಟ್
ತುಮಕೂರು: ವೈದ್ಯರ ಮುಷ್ಕರದಿಂದ ಬಡಜನತೆ, ರೋಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೋಮವಾರ ಜಿಲ್ಲಾಸ್ಪತ್ರೆ ಬಿಕೋ ಎನ್ನುತ್ತಿತ್ತು. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪೊಲೀಸರನ್ನು ಬಿಟ್ಟರೆ, ರೋಗಿಗಳು ಎಡತಾಕುವುದು ಅತ್ಯಂತ ವಿರಳವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement