17 ರಂದು ಬ್ರಹ್ಮಯಕ್ಷರ ವಾರ್ಷಿಕ ಪೂಜೆ
ತುಮಕೂರು: ಮಧುಗಿರಿ ತಾಲೂಕು ಮಿಡಿಗೇಶಿಯಲ್ಲಿ ಫೆ. 17 ರಂದು ಭಗವಾನ್ 1008 ಶ್ರೀ ಸುಪಾರ್ಶ್ವನಾಥಸ್ವಾಮಿ ಮತ್ತು ಬ್ರಹ್ಮಯಕ್ಷರ ವಾರ್ಷಿಕ ಪೂಜಾ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ. ಪಾವನ ಸಾನಿಧ್ಯ ಮತ್ತು ಆಶೀರ್ವಚನವನ್ನು ಭಟ್ಟಾರಕ ಕಲ್ಪತರು ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಎನ್.ಬಿ. ಶ್ರೇಯಾಂಸಕುಮಾರ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಧುಗಿರಿ ಉಪವಿಭಾಗಾಧಿಕಾರಿ ಅನಿತಾ, ಧಾರ್ಮಿಕ ಉಪನ್ಯಾಸವನ್ನು ಪದ್ಮರಾಜ ದಂಡಾವತಿ, ವಿದ್ಯಾಧರ್, ಎಸ್.ಎನ್. ರಾಜು, ಮಂಜುನಾಥ್ ಆಗಮಿಸಲಿದ್ದಾರೆ.