ಕಾಲೇಜಿಗೆ ತೆರಳಿದ ಯುವತಿ ನಾಪತ್ತೆ
ತುಮಕೂರು: ಕಾಲೇಜಿಗೆ ಹೋದ ಯುವತಿಯೋರ್ವಳು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳವನಹಳ್ಳಿ ಗ್ರಾಮದ ವಾಸಿ ವಿನುತಾ ಎಂಬುವರು ಜ.5 ರಂದು ಬೆಳಿಗ್ಗೆ 8.30 ಕ್ಕೆ ಕಾಲೇಜಿಗೆ ಹೋಗಿಬರುವುದಾಗಿ ಹೇಳಿ ಹೋದವರು ಪುನಃ ವಾಪಸು ಮನೆಗೆ ಹಿಂದಿರುಗಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯುವತಿ ಪತ್ತೆಯಾಗಿಲ್ಲ ಎಂದು ಯುವತಿ ತಂದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿ ಪತ್ತೆಯಾದಲ್ಲಿ ಸಮೀಪದ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಿದೆ.
ವಿಸ್ತರ ಣಾಧಿಕಾರಿ ಗೈರಿಗೆ ಆಕ್ರೋಶ
ಪಾವಗಡ: ಇಲ್ಲಿನ ಬಿಸಿಎಂ ಇಲಾಖೆಗೆ ನಿಯೋಜಿತರಾದ ವಿಸ್ತಣಾಧಿಕಾರಿಯೊಬ್ಬರು ನಿಗದಿತ ಅವಧಿಯಲ್ಲಿ ಕಚೇರಿಯಲ್ಲಿ ಇಲ್ಲದ ಕಾರಣ ಸಾರ್ವಜನಿಕ ಕೆಲಸಗಳು ಕುಂಠಿತವಾಗುತ್ತಿವೆ ಎಂದು ತಾಲೂಕು ದಂಡೋರ ಅಧ್ಯಕ್ಷ ವಳ್ಳೂರು ನಾಗೇಶ್ ಹಾಗೂ ಮುಖಂಡ ನಾರಾಯಣಪ್ಪ ಆರೋಪಿಸಿದ್ದಾರೆ. ಸಮಸ್ಯೆ ಇದೇ ರೀತಿ ಮುಂದುವರಿದರೆ ಮಾದಿಗ ದಂಡೋರ ಸಮಿತಿ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನಾರಾಯಣಪ್ಪ, ನಾಗೇಶ್, ರಾಮಾಂಜಿನಪ್ಪ ಹನುಮಂತರಾಯಪ್ಪ ಮುಂತಾದವರು ಎಚ್ಚರಿಸಿದ್ದಾರೆ.