'ಮಧುಗಿರಿ ಕ್ಷೇತ್ರ ಜೆಡಿಎಸ್ ಸಂಘಟನೆಯೇ ನನ್ನ ಉದ್ದೇಶ'
ಮಧುಗಿರಿ: ಕುಮಾರಸ್ವಾಮಿ ಸಲಹೆ ಮೇರೆಗೆ ಮಧುಗಿರಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೇ ನನ್ನ ಉದ್ದೇಶ ಎಂದು ಸಾರಥಿ ಚಿತ್ರದ ನಿರ್ಮಾಪಕ ಕೆ.ವಿ.ಸತ್ಯ ಪ್ರಕಾಶ್ ಹೇಳಿದರು.
ತಾಲೂಕಿನ ದೊಡ್ಡದಾಳವೆಟ್ಟ ಗ್ರಾಮದ ಸುಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಆದ ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ಮೇರೆಗೆ ತಾಲೂಕಿನಲ್ಲಿ ಜೆಡಿಎಸ್ ಅನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವುದಾಗಿ ತಿಳಿಸಿ, ಕುಮಾರಣ್ಣ ಸಿಎಂ ಆಗಿದ್ದಾಗ ಬಡವರ, ಅಂಗವಿಕಲರ ಹಾಗೂ ಅಲ್ಪಸಂಖ್ಯಾತರ ಏಳಿಗೆಗೆ ಸಾಕಷ್ಟು ಯೋಜನೆ ಜಾರಿಗೊಳಿಸಿ ರಾಜ್ಯದ ಜನರ ಮನೆ ಮಾತಾಗಿದ್ದರು. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಬೇಕು. ಅಭ್ಯರ್ಥಿ ಯಾರದರೇನು, ಸಂಘಟನೆ ಅತಿ ಮುಖ್ಯ ಎಂದರು.
ಮುಖಂಡರಾದ ಹೊಂಬಾಳೇಗೌಡ, ಜಗದೀಶ್, ಹನುಮಂತರಾಯಪ್ಪ, ಸತೀಶ್,ನರಸಿಂಹಮೂರ್ತಿ, ರಿಯಾಜ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.