ರೋಮಾಂಚಕ ಡರ್ಟ್ ಟ್ರ್ಯಾಕ್ ರೇಸ್
ತಿಪಟೂರು: ನಗರದ ಮಿಲೇನಿಯಂ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ರೇಸ್ಗೆ ಚಾಲನೆ ನೀಡಲಾಯಿತು.
ರೋಮಾಂಚಕ ಬೈಕ್ ರೇಸ್ನ ಮೊದಲನೇ ಸುತ್ತಿನಲ್ಲಿ ರಿಜ್ವಾನ್ ಖಾನ್ ಪ್ರಥಮ ಸ್ಥಾನ, ಸಯೀದ್ ಅಬ್ದುಲ್ ದ್ವಿತೀಯ ಸ್ಥಾನ, ಸದ್ಧಾಮ್ ತೃತೀಯ ಸ್ಥಾನಗಳಿಸಿದರು.
ಇಂಟರ್ಮೀಡಿಯಾ ವಿಭಾಗದಲ್ಲಿ ಸಯದ್ ಅಬ್ದುಲ್ ಪ್ರಥಮ, ಮಹಮದ್ ಸಲ್ಮಾನ್ ಹಾಸನ ದ್ವೀತಿಯ ಸ್ಥಾನ, ಸುಜಾತ್ ತೃತೀಯ ಸ್ಥಾನಗಳಿಸಿದ್ದಾರೆ.
ಘೋರ್ ಸ್ಟ್ರೋಕ್ ವಿಭಾಗದಲ್ಲಿ ಮಧು ಬೆಂಗಳೂರು ಪ್ರಥಮ ಸ್ಥಾನ, ರಾಜೇಂದ್ರ ಶಿವಮೊಗ್ಗ ದ್ವಿತೀಯ ಸ್ಥಾನ, ಲಿಕಿತೀಶ್ ತೃತೀಯ ಸ್ಥಾನ ಗಳಿಸಿದರು. ಎಕ್ಸ್ಪರ್ಟ್ ವಿಭಾಗದಲ್ಲಿ ರಾಜೇಂದ್ರ ಪ್ರಥಮ, ಮೂರ್ತಿ ದ್ವಿತೀಯ, ಅತೀಕ್ ಖಾನ್ ತೃತೀಯ ಸ್ಥಾನಗಳಿಸಿದ್ದಾರೆ. ಇಂಡಿಯನ್ ಓಪನ್ ವಿಭಾಗದಲ್ಲಿ ಮಧು ಬೆಂಗಳೂರು ಪ್ರಥಮ, ಯುವ ಬೆಂಗಳೂರು ದ್ವಿತೀಯ ಅತೀಕ್ ಖಾನ್ ತೃತೀಯ ಸ್ಥಾನಗಳಿಸಿದ್ದಾರೆ.
ಲೋಕಲ್ ವಿಭಾಗದಲ್ಲಿ ಅನಿಲ್ ಪ್ರಥಮ, ಷಾಬಾಜ್ ದ್ವಿತೀಯ ಮತ್ತು ಋತೀಕ್ ತೃತೀಯ ಸ್ಥಾನಗಳಿಸಿದರು. ನೆರೆದಿದ್ದ ಸಾವಿರಾರು ಜನರಲ್ಲಿ ಉಸಿರು ಬಿಗಿ ಹಿಡಿಯುವ ರೋಮಾಂಚನಕಾರಿ ಪ್ರದರ್ಶನ ನೀಡಿದರು.