ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುಬ್ಬಿ: 10.91 ಲಕ್ಷ ಉಳಿತಾಯ ಬಜೆಟ್

Rashmi Kasaragodu
Updated On : 13 Feb 2013, 11:30 am

ಗುಬ್ಬಿ:  ಪಟ್ಟಣ ಪಂಚಾಯ್ತಿಯ 2013-14ನೇ ಸಾಲಿನ ಆಯವ್ಯಯ ಬಜೆಟ್ ಪಪಂ ಅಧ್ಯಕ್ಷೆ ರೂಪಾ ಅವರು
ಮಂಡಿಸಿದ್ದು, ಪ್ರಾರಂಭಿಕ ಶಿಲ್ಕು 191.41, 2013-14ನೇ ಸಾಲಿನ ಜಮಾ 1848.75, ಒಟ್ಟು 2040.16, ಖರ್ಚು 2029.25, ಒಟ್ಟು 10.91 ಲಕ್ಷ ಉಳಿತಾಯ ಬಜೆಟ್‌ನಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಸದಸ್ಯ ಸಿ.ಮೋಹನ್, ಶೇ.22.75 ಮೀಸಲಿಟ್ಟ ಹಣದಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಉಚಿತ ಗ್ಯಾಸ್ ಸೌಲಭ್ಯಕ್ಕೆ ಕೋರಿ 139 ಅರ್ಜಿಗಳು ಬಂದರೂ ಇಲ್ಲಿಯವರೆಗೂ ಅರ್ಜಿ ವಿಲೇವಾರಿಯಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಯಾವುದೇ ಶೌಚಾಲಯಗಳನ್ನು ನಿರ್ಮಿಸಿಲ್ಲ. ಹೇರೂರು ನೀರು ಸಂಗ್ರಹ ಘಟಕದ ನೀರು ಕೆಲವೇ ದಿನಗಳಲ್ಲಿ ಬರಿದಾಗಲಿದೆ. ಬೇಸಿಗೆಯನ್ನು ಎದುರಿಸಲು ಯಾವ ಕ್ರಮ ಕೈಗೊಂಡಿದ್ದೀರಿ? ಪಟ್ಟಣ ಪಂಚಾಯ್ತಿ ಮಳೆಗೆಯಿಂದ ಇಲ್ಲಿಯವರೆಗೂ ಮಾಸಿಕ ಬಾಡಿಗೆ ಸಂಗ್ರಹವಾಗಿಲ್ಲ. ಮಳಿಗೆ ಸ್ವಚ್ಛತೆಯಿಲ್ಲಯ. ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಾಯಿಗಳ ಸಂಖ್ಯೆ ಹೆಚ್ಚಿದ್ದು ಜನರು ಆಂತಕದಲ್ಲಿ ನಡೆದಾಡುವಂತಾಗಿದೆ ಎಂದರು.
ನಗರದ ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ ನಾಮನಿರ್ದೇಶಿತ ಸದಸ್ಯ ಬಸವರಾಜು ಮಾತನಾಡಿ, ಪ.ಪಂ. ಕಟ್ಟಡವೇ ಸ್ವಚ್ಛವಿಲ್ಲವೆಂದ ಮೇಲೆ ಪಟ್ಟಣದ ಸ್ವಚ್ಛತೆ ಹೇಗೆ ಕಾಪಾಡಲು ಸಾಧ್ಯ ಎಂದು ಪ್ರಸ್ನಿಸಿದರು.
ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಪಟ್ಟಣದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಸರಿಯಾಗದಿದ್ದರೆ ಪಟ್ಟಣ ಪಂಚಾಯ್ತಿತಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಮುಖ್ಯಾಧಿಕಾರಿ ಸಿ.ಯೋಗಾನಂದ ಮಾತನಾಡಿ, ಕೆಲವು ಖಾಸಗಿ ಕೊಳವೆಬಾವಿಗಳ ಮಾಲೀಕರಿಂದ ನೀರು ಪಡೆಯಲು ಯೋಜನೆ ರೂಪಿಸಲಾದೆ. ನಗರದಲ್ಲಿ 14 ಕೊಳವೆ ಬಾವಿ ಹಾಗೂ 37 ಹ್ಯಾಂಡ್ಪ್‌ಂಪ್ಕಾರ್ಯನಿರ್ವಹಿಸುತ್ತಿವೆ. ಇಷ್ಟಲ್ಲದೆ ಹೊಸದಾಗಿ 6 ಕೊಳವೆಬಾವಿ ಕೊರೆಸಲು ಕ್ರಿಯಾಯೋಜನೆ ತಯಾರಿಸಿ ಸರ್ಕಾರದ ಅನುಮೋದನೆಗೆ ಕಳಿಹಿಸಲಾಗಿದೆ ಎಂದರು. ಸಭೆಯಲ್ಲಿ ಆರೋಗ್ಯಾಧಿಕಾರಿ ರೈಸ್ ಅಹಮದ್, ಲೆಕ್ಕಾಧಿಕಾರಿ ಜಯಣ್ಣ, ಎಂಜಿನಿಯರ್ ಪ್ರಕಾಶ್ ಸೇರಿದಂತೆ ಪಟ್ಟಣ ಪಂಚಾಯ್ತಿ ಸದಸ್ಯರು ಸಭೆಯಲ್ಲಿ ಭಾಗ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement