ವಾಟರ್ ಗ್ರಿಡ್: ಸಿದ್ಧಗಂಗಾಶ್ರೀ ಬೆಂಬಲ
ತುಮಕೂರು: ಮಧ್ಯ ಕರ್ನಾಟಕದ 9 ಜಿಲ್ಲೆಗಳಿಂದ 43 ತಾಲೂಕುಗಳಿಗೆ ನೀರು ಹರಿಸುವ ವಾಟರ್ ಗ್ರಿಡ್ ಯೋಜನೆ ಜಾರಿ ಸಂಬಂಧ ನಡೆಯುತ್ತಿರುವ ಪ್ರತಿಭಟನೆಯನ್ನು ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಬೆಂಬಲಿಸಿದ್ದಾರೆ. 124 ಟಿಎಂಸಿ ನೀರು ತರುವ ಈ ಯೋಜನೆಗೆ ಸರ್ಕಾರ ಬೇಗ ಹಣ ಬಿಡುಗಡೆ ಮಾಡಲಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅವರು ಪುನರುಚ್ಚರಿಸಿದರು.