ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆದಿಪುರಾಣ ಎಲ್ಲಾ ಜೈನ ಪುರಾಣಗಳ ತಲಕಾವೇರಿ

Rashmi Kasaragodu
Updated On : 15 Feb 2013, 12:14 pm

ತುಮಕೂರು: ಕನ್ನಡ ನಾಡು ಕಂಡ ಶ್ರೇಷ್ಠ ಕವಿ ಪಂಪನು ರಚಿಸಿದ ಆದಿಪುರಾಣ ಎಲ್ಲಾ ಜೈನ ಪುರಾಣಗಳ ತಲಕಾವೇರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅಭಿಪ್ರಾಯಪಟ್ಟರು.
ಅವರು ಜ್ಞಾನಬುತ್ತಿ ಸತ್ಸಂಗ ಕೇಂದ್ರ ತುಮಕೂರಿನ ವಿದ್ಯಾವಾಹಿನಿ ಕಾಲೇಜಿನಲ್ಲಿ ಆಯೋಜಿಸಿದ್ದ ಪಂಪನ ಆದಿಪುರಾಣ 2ನೇ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ಮಾಡಿದರು.
ಆದಿಪುರಾಣದ ಸಾರವೆಂದರೆ ಎಲ್ಲಾ ಸುಖಗಳಿಗೂ ಒಂದು ಕೊನೆಯಿದೆ. ಎಷ್ಟೆ ಸುಖವಿರಲಿ ಮೈ ಮರೆಯಬಾರದು. ಮರೆತು ಭೋಗಿಸಿದರೆ ಮರಣ ಖಚಿತ ಎಂಬುದು ಪಂಪನ ಸಂದೇಶವಾಗಿದೆ. ಈ ಜೈನ ಪುರಾಣದ ಪ್ರಕಾರ ಭವಾಂತರಗಳಲ್ಲೂ ಮುಂದುವರಿಯುತ್ತದೆ. ಈ ಆದಿ ಪುರಾಣದಲ್ಲಿ ಎರಡು ನೃತ್ಯಗಳಾದ ಇಂದ್ರನ ನೃತ್ಯ, ನೀಲಾಂಜನೇಯ ನೃತ್ಯಗಳನ್ನು ಪಂಪನು ಅದ್ಭುತವಾಗಿ ವರ್ಣಿಸಿದ್ದಾನೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎ. ಚಂದ್ರಯ್ಯ ಮಾತನಾಡಿ ಒಳ್ಳೆಯ ವಾಕ್ ಶಕ್ತಿಯು ಎಲ್ಲರನ್ನು ಮೂಕವಿಸ್ಮತರನ್ನಾಗಿ ಮಾಡುತ್ತದೆ. ಜ್ಞಾನಬುತ್ತಿ ಸತ್ಸಂಗ ಕೇಂದ್ರದಲ್ಲಿ ನಡೆಯುವ ಉಪನ್ಯಾಸಗಳು ಕಲ್ಲು ಸಕ್ಕರೆ ಸವಿದಂತೆ ಜ್ಞಾನಾಸಕ್ತರಿಗೆ ರಸದೌತಣ ನೀಡುತ್ತದೆ ಎಂದು ಹೇಳಿದರು. ಹಿಂದೆ ನಡೆದ ತುಮಕೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ತಂದಿದ್ದ ಬೆಳ್ಳಾವೆ  ಸ್ಮರಣ ಸಂಚಿಕೆ ಡಾ. ವೈ.ಎಂ. ರೆಡ್ಡಿ ಅವರು ಬಿಡುಗಡೆಗೊಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ. ಚಂದ್ರಪ್ಪ, ಸಿದ್ದೇಶ್‌ಗೌಡರು ರಚಿಸಿದ ಹೊಸ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು.
ಈ ಸತ್ಸಂಗ ಕೇಂದ್ರದ ಸಂಚಾಲಕ ಆರ್. ಬಸವರಾಜಪ್ಪ ಪ್ರಾರ್ಥಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement