ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ: ವಿಚಾರಣೆ

Rashmi Kasaragodu
Updated On : 15 Feb 2013, 12:16 pm

ಶಿರಾ: ಪಟ್ಟಣದ ಚಂಗಾವರ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಅವರು ನಿಲಯದ ಕುಂದು ಕೊರತೆಗಳನ್ನು ಪರಿಶೀಲಿಸಿದರು. ಇದೇ ಸಮಯದಲ್ಲಿ ಒಂದೇ ತಟ್ಟೆಯಲ್ಲಿ ಇಬ್ಬಿಬ್ಬರು ವಿದ್ಯಾರ್ಥಿನಿಯರು ಊಟ ಮಾಡುತ್ತಿದ್ದ ಕಂಡು ಬೆರಗಾಗಿ ನಿಲಯಪಾಲಕರನ್ನು ಈ ಕುರಿತು ವಿಚಾರಿಸಿದಾಗ ಊಟದ ತಟ್ಟೆಗಳು ಕಡಿಮೆ ಇದ್ದ ಕಾರಣ ಇಬ್ಬಿಬ್ಬರು ವಿದ್ಯಾರ್ಥಿನಿಯರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂತು. ಇದರಿಂದ ಬೇಸರಗೊಂಡ ಅವರು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಕಡಿಮೆ ಇರುವ ಊಟದ ತಟ್ಟೆಗಳನ್ನು ಕೂಡಲೇ ತರಿಸಿ ನಾಳೆಯಿಂದಲೇ ಪ್ರತ್ಯೇಕ ತಟ್ಟೆ ನೀಡುವಂತೆ ನಿರ್ದೆಶನ ನೀಡಿದರು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕೂಡಲೇ ಮಂಜೂರಾತಿ ಮಾಡಿಕೊಡುವಂತೆ ಸೂಚಿಸಿದರು. ನಿಲಯದ ಒಟ್ಟಾರೆ ನಿರ್ವಹಣೆ ಕುರಿತು ಅಸಮಧಾನ ವ್ಯಕ್ತಪಡಿಸಿದರು.
ನಾಳೆ ವಿದ್ಯುತ್ ವ್ಯತ್ಯಯ
ತಿಪಟೂರು: ತಿಪಟೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ ನೊಣವಿನಕೆರೆ ಉಪಸ್ಥಾವರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುಮಕೂರಿನ ವಿಭಾಗದವರು ತುರುವೇಕೆರೆಯಲ್ಲಿ ಬೃಹತ್ ಕಾಮಗಾರಿ ತುರ್ತು ಕೆಲಸ ನಿರ್ವಹಿಸುವುದರಿಂದ ನೊಣವಿನಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಂದು (ಫೆ.16) ಬೆಳಗ್ಗೆ 9ಗಂಟೆಯಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಆದ್ದರಿಂದ ವಿದ್ಯುತ್ ಗ್ರಾಹಕರು ಮತ್ತು ರೈತ ಬಾಂಧವರು ಎಂದಿನಂತೆ ಬೆಸ್ಕಾಂ ಜೊತೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಪ್ಪಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಿ ಶ್ರೀಗಳ ಹೆಸರಿನ ವಿರೋಧಕ್ಕೆ ವಿಷಾದ
ತುಮಕೂರು: ನಗರದ ಟೌನ್‌ಹಾಲ್ ವೃತ್ತಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡುವ ಸಂಬಂಧ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ ಎಂದು ಒಕ್ಕಲಿಗರ ವಿಕಾಸ ವೇದಿಕೆ ತಿಳಿಸಿದೆ. ದೀನ ದಲಿತರು ಸೇರಿದಂತೆ ಎಲ್ಲಾ ಜನಾಂಗದ ಸಾಮಾಜಿಕ ಏಳಿಗೆಗಾಗಿ ಸೇವೆ ಸಲ್ಲಿಸಿ ಹಸಿರು ಕ್ರಾಂತಿ ಹರಿಕಾರರು, ಶಿಕ್ಷಣ ತಜ್ಞರು, ತ್ರಿವಿಧ ದಾಸೋಹ ಮೂರ್ತಿ ಶ್ರೀಗಳ ಹೆಸರನ್ನು ಟೌನ್‌ಹಾಲ್ ವೃತ್ತಕ್ಕೆ ನಾಮಕರಣ ಮಾಡುವುದು ಈ ನಾಡಿನ ಸಮಸ್ತ ಭಕ್ತರ ಆಶಯ. ಆದರೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ ಎಂದು ವೇದಿಕೆ ಅಧ್ಯಕ್ಷ ಎಸ್. ಉದಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement