38 ಗ್ರಾಂ ಚಿನ್ನಾಭರಣ ದೋಚಿ ಪರಾರಿ
ಕುಣಿಗಲ್: ಮದುವೆಗೆಂದು ಬಂದಿದ್ದ ಯುವಕನನ್ನು ಅಪರಿಚಿತರು ಪುಸಲಾಯಿಸಿ ಕರೆದೊಯ್ದು 38 ಗ್ರಾಂಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶುಕ್ರವಾರ ಪಟ್ಟಣದ ದಿವ್ಯ ಕನ್ವೆನ್‌ಷನ್ ಹಾಲ್‌ನ ಮದುವೆಗೆಂದು ಬಂದಿದ್ದ ಪಟ್ಟಣದ ಅಗ್ರಹಾರದ ವಾಸಿ ರಾಜು ಎಂಬಾತನನ್ನು, ಅಪರಿತ ಇಬ್ಬರು ವ್ಯಕ್ತಿಗಳು ಪುಸಲಾಯಿಸಿ, ಸಮೀಪದಲ್ಲಿದ್ದ ತೋಟದ ಸಾಲಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆತನನ್ನು ಬೆದರಿಸಿ, ಖಾರದಪುಡಿ ಎರಚಿ ಆತ ಧರಿಸಿದ್ದ 38 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಜು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.