ಇಂದಿನಿಂದ ಅನುಗ್ರಹ ಸಂಗೀತ ಕಾರ್ಯಕ್ರಮ
ತುಮಕೂರು: ಇಲ್ಲಿನ ಶಂಕರಮಠದಲ್ಲಿ ಫೆ.16 ಮತ್ತು 17 ರಂದು ಅನುಗ್ರಹ ಸಂಗೀತ ಮಹಾವಿದ್ಯಾಲಯ ವಾರ್ಷಿಕೋತ್ಸವ ಮತ್ತು ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಹಾಗೂ ತ್ಯಾಗರಾಜ ಸ್ವಾಮಿಗಳ ಆರಾಧನ ಮಹೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. 16 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಸ್ತೋತ್ರ, ದೇವರನಾಮ ಹಾಗೂ ವಚನಗಳ ಸಾಮೂಹಿಕ ಗಾಯನವಿದೆ. ಸಂಜೆ 5 ಗಂಟೆ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷ ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಸಂಪಿಗೆ ವೆಂಕಟನಾರಾಯಣ ವಹಿಸಲಿದ್ದಾರೆ. ಅತಿಥಿಗಳಾಗಿ ಗೌರಿಬಿದನೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎಲ್. ರಾಘವೇಂದ್ರ ಗುಪ್ತ, ಕಿರಣಕುಮಾರ್, ಕೆ.ಎಸ್. ಉಮೇಶಪ್ಪ, ವಿ.ಎಸ್. ರಾಮಚಂದ್ರನ್ ಆಗಮಿಸಲಿದ್ದಾರೆ. ಸಂಜೆ 6 ರಿಂದ 8.30 ರವರೆಗೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ.