ಹಳೇ ವೈಷಮ್ಯ, ವ್ಯಕ್ತಿ ಕೊಲೆ
ಚಿಕ್ಕನಾಯಕನಹಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಶೆಟ್ಟೀಕೆರೆ ಹೋಬಳಿ ಬಾಣದೇವರ ಹಟ್ಟಿಯ ಲಕ್ಷ್ಮಯ್ಯ (65) ಕೊಲೆಯಾದ ದುರ್ದೈವಿ. ಅದೇ ಗ್ರಾಮದ ಕೃಷ್ಣಯ್ಯ ಎಂಬುವವನಿಗೂ ಮೃತ ಲಕ್ಷ್ಮಯ್ಯನಿಗೂ ಬಹಳ ವರ್ಷಗಳಿಂದ ವೈಷಮ್ಯವಿದ್ದು, ಫೆಬ್ರವರಿ 14ರಂದು ಸಂಜೆ 7 ಗಂಟೆ ಸಮಯದಲ್ಲಿ ಆರೋಪಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಪಿಎಸ್ಐ ಗೋವಿಂದರಾಜು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದು, ವೃತ್ತನಿರೀಕ್ಷಕ ಕೆ. ಪ್ರಭಾಕರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.