ಹಾಸ್ಟೆಲ್ ವಾರ್ಡನ್ ಅಮಾನತಿಗೆ ಒತ್ತಾಯ
ತುಮಕೂರು: ತುಮಕೂರು ತಾಲೂಕು ಹೆಗ್ಗೆರೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ಎಸ್.ಸಿ, ಎಸ್‌ಟಿ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯಿಂದ ಕೂಡಿದ್ದು ಈ ಕೂಡಲೇ ಹಾಸ್ಟೆಲ್ ವಾರ್ಡನ್ ಅನ್ನು ಅಮಾನತುಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್. ರಾಮಯ್ಯ ಒತ್ತಾಯಿಸಿದ್ದಾರೆ.
ಈ ಹಾಸ್ಟೆಲ್‌ನಲ್ಲಿ 45 ವಿದ್ಯಾರ್ಥಿಗಳು ಇದ್ದಾರೆ. ಈ ಹಾಸ್ಟೆಲ್‌ನ ನಿಲಯಪಾಲಕರು 4-5 ದಿನಕ್ಕೆ ಹಾಸ್ಟೆಲ್‌ಗೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳುವರೇ ಇಲ್ಲ. ಹಾಸ್ಟೆಲ್‌ನಲ್ಲಿ ಶುಚಿತ್ವ ಇಲ್ಲ. ಶೌಚಾಲಯ ಮತ್ತು ಸ್ನಾನದ ರೂಂಗಳು ದುರ್ನಾತದಿಂದ ಕೂಡಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಜಿ.ಪಂ. ಅಧ್ಯಕ್ಷರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು, ಸಿಇಓ ಕೂಡಲೇ ಭೇಟಿ ನೀಡಿ ನಿಲಯ ಪಾಲಕರನ್ನು ಅಮಾನತು ಮಾಡಬೇಕೆಂದು ರಾಮಯ್ಯ ಆಗ್ರಹಿಸಿದ್ದಾರೆ.
ನಾಳೆ ವಧುವರರ ಮುಖಾಮುಖಿ
ತುಮಕೂರು: ಇಲ್ಲಿನ ಭದ್ರಮ್ಮ ಕಲ್ಯಾಣ ಮಂಟಪದ ಬಳಿ ಇರುವ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಫೆ. 17 ರಂದು ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ಬ್ರಾಹ್ಮಣ ಹಾಗೂ ಎಲ್ಲಾ ವರ್ಗದ ವಧುವರರ ಮುಖಾಮುಖಿ ಏರ್ಪಡಿಸಲಾಗಿದೆ. ಬೆಂಗಳೂರಿನ ಕೀರ್ತಿ ಕಲ್ಯಾಣ ಕೇಂದ್ರ ಸ್ಮಾರ್ತ, ಮಾಧ್ವ, ಅಯ್ಯರ್, ಅಯ್ಯಂಗಾರ್,
ಶ್ರೀವೈಷ್ಣವ, ವಧು-ವರರ ಹಾಗೂ ವಿಧವೆ, ವಿಧುರರು, ವಿಚ್ಚೇದಿತರು, ಅಂಗವಿಕಲರು, ಅಂತರ್ಜಾತಿ ವಿವಾಹದವರು, ಒಕ್ಕಲಿಗ, ಕುಂಚಿಟಿಗ, ಮರಾಠಿ, ರೆಡ್ಡಿ, ಡೋಬಿ, ನಾಯಕ, ಕುಂಬಾರ, ಯಾದವ, ಗೊಲ್ಲ, ಲಿಂಗಾಯಿತ, ದೇವಾಂಗ, ವಿಶ್ವಕರ್ಮ, ಎಸ್.ಸಿ, ಎಸ್‌ಟಿ ಹಾಗೂ ಇತರೆ ಜಾತಿ ವಧುವರರು ಫೋಟೋ ಮತ್ತು ಜಾತಕದೊಂದಿಗೆ ಫೆ. 17 ರಂದು ಆಗಮಿಸಬಹುದು. ವಿವರಗಳಿಗೆ 9844430740 ಸಂಪರ್ಕಿಸಬಹುದು ಎಂದು ಲಕ್ಷ್ಮೀರಾಮಚಂದ್ರ ತಿಳಿಸಿದ್ದಾರೆ.