ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರೋಗ್ಯದ ಬಗ್ಗೆ ಆಲಸ್ಯ ಬೇಡ: ಡಾ.ಬಸವರಾಜು

Parashurama
Updated On : 17 Feb 2013, 12:41 pm

ಹುಳಿಯಾರು: ಜಾಗತಿಕ ಪ್ರಪಂಚದಲ್ಲಿ ವಾತಾವರಣ ಕಲುಶಿತಗೊಂಡಿದ್ದು, ಜೀವ ಸಂಕುಲದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ನಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕಿದ್ದು, ಯಾವುದೇ ಕಾರಣದಿಂದಲೂ ಆರೋಗ್ಯದ ಬಗ್ಗೆ ಆಲಸ್ಯವನ್ನು ಹೊಂದದೆ ಎಚ್ಚರಿಕೆ ವಹಿಸಬೇಕೆಂದು ವೈದ್ಯ ಬಸವರಾಜು  ಕರೆ ನೀಡಿದರು.
ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಮೈತ್ರೇಯ ಟ್ರಸ್ಟ್ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರತಿಯೊಬ್ಬರು ದಿನ ನಿತ್ಯದ ಜೀವನದ ಜಂಜಾಟದಲ್ಲಿ  ತಮ್ಮ ಆರೋಗ್ಯದ ಹಿತವನ್ನೇ ಮರೆತು ಆರೋಗ್ಯ ಹದಗೆಡುವಂತೆ ಮಾಡಿಕೊಳ್ಳುತ್ತಿದ್ದು, ಮಧುಮೇಹ, ಹೃದಯ ಬೇನೆಯಂತಹ ಅನೇಕ ಮಾರಕ ರೋಗಗಳಿಂದ ಬಳಲುತ್ತಿದ್ದು ಮಂಜಾಗ್ರತೆಯಾಗಿ ಆಹಾರದಲ್ಲಿ ಸಮತೋಲನ ಕಾಪಾಡಿಕೊಂಡು, ಪೌಷ್ಠಿಕ ಆಹಾರ ಸೇವನೆ ಹಾಗೂ ಪ್ರತಿನಿತ್ಯ ವ್ಯಾಯಾಮ, ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಂಡಲ್ಲಿ ಇದನ್ನು ತಡೆಗಟ್ಟಬಹುದು ಎಂದರು. ರೋಗ ಬಂದಾಗ ನರಳುವುದಕ್ಕಿಂತ ರೋಗ ಬರದಂತೆ ತಡೆಗಟ್ಟುವುದು ಸೂಕ್ತ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement