ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕರಾಟೆ ಪಟು ವಿಜಯಲಕ್ಷ್ಮೀಗೆ ಆತ್ಮೀಯ ಸನ್ಮಾನ

Parashurama
Updated On : 17 Feb 2013, 12:40 pm

ತುಮಕೂರು: ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕೂಟದ ವತಿಯಿಂದ ನಡೆದ ಮಾಸಿಕ ಕಾರ್ಯಕ್ರಮದಲ್ಲಿ ಕೊರಟಗೆರೆಯ ಕರಾಟೆ ಪಟು ವಿಜಯಲಕ್ಷ್ಮೀ ವಿಶ್ವನಾಥ್ ಅವರನ್ನು ಕವಿತಾಕೃಷ್ಣ ಅವರು ಸನ್ಮಾನಿಸಿದರು.
ವಿಜಯಲಕ್ಷ್ಮೀ ಅವರು ತಾವು ಕರಾಟೆ ಕಲಿತಿದ್ದಲ್ಲದೆ ಇತರರಿಗೂ ಕಲಿಸಿ ಮಾದರಿ ಮಹಿಳೆಯಾಗಿದ್ದಾರೆ ಎಂದರು. ವಿಜಯಲಕ್ಷ್ಮೀ ಅವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಂಡು ನಾಲ್ಕು ಬಾರಿ ಬಹುಮಾನ ಗಳಿಸಿದ್ದಾರೆ ಎಂದು ಪ್ರಶಂಸಿಸಿದರು.
ವಿದೇಶದಲ್ಲೂ ಕರಾಟೆ ಆಡಿದ ಕೀರ್ತಿ ಇವರದ್ದಾಗಿದೆ. ಇವರ ಪ್ರತಿಭೆ ಈಗ ಜಗದಗಲ, ಮುಗಿಲಗಲ ಬೆಳೆಯಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಲಕ್ಷ್ಮೀ ಅವರು ಮಹಿಳೆಯರು ಕರಾಟೆ ಕಲಿಯಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು. ಅಲ್ಲದೇ ಶಾಲೆಯಲ್ಲಿ ಕರಾಟೆ ಕಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಎಂಟು ಪುಟಾಣಿ ಕರಾಟೆ ಪಟುಗಳು ಕರಾಟೆ ಆಡಿ ಎಲ್ಲರನ್ನು ರಂಜಿಸಿದರು. 30 ಕ್ಕೂ ಹೆಚ್ಚು ಮಕ್ಕಳು ಮತ್ತು ಮಹಿಳೆಯರು ಸ್ವರಚಿತ ಕವನ ವಾಚಿಸಿದರು. ಕಮಲಾ ಬಡ್ಡಿಹಳ್ಳಿ, ಸಣ್ಣರಂಗಮ್ಮ, ಬಿಂಬಕುಮಾರ್, ಪದ್ಮಾಕೃಷ್ಣಮೂರ್ತಿ, ಸಿದ್ದರಾಜ್ ಐವಾರ್, ಉಮಾಶರ್ಮ, ತುಮಕೂರು ಭಾರ್ಗವಿ, ನರಸಿಂಹಯ್ಯ, ರಾಮಣ್ಣ ಎಲೆನ್‌ಸಿಂಗ್, ಉಷಾ, ಮಹಾಲಕ್ಷ್ಮೀ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement