ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟೌನ್‌ಹಾಲ್‌ಗೆ ಗುಬ್ಬಿ ವೀರಣ್ಣ ಹೆಸರಿಡಿ

Parashurama
Updated On : 17 Feb 2013, 12:42 pm

ತುಮಕೂರು: ತುಮಕೂರಿನ ಟೌನ್‌ಹಾಲ್ ವೃತ್ತಕ್ಕೆ ಪದ್ಮಶ್ರೀ ಗುಬ್ಬಿ ವೀರಣ್ಣನವರ ಹೆಸರು ಇಡಬೇಕು ಎಂದು ನಾಟಕರತ್ನ ಡಾ. ಗುಬ್ಬಿ ವೀರಣ್ಣ ರಂಗಭೂಮಿ ಕಲಾವಿದರ ಒಕ್ಕೂಟ ಆಗ್ರಹಿಸಿದೆ. ಕಳೆದ ಅನೇಕ ವರ್ಷಗಳಿಂದ ಈ ವೃತ್ತಕ್ಕೆ ಡಾ. ಗುಬ್ಬಿ ವೀರಣ್ಣ ವೃತ್ತ ಎಂದು ಹೆಸರಿಡುವಂತೆ ಜಿಲ್ಲಾಡಳಿತ ಮತ್ತು ನಗರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಒಂದು ವೇಳೆ ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಗುಬ್ಬಿ ವೀರಣ್ಣನವರ ಹೆಸರನ್ನು ಹೊರೆತುಪಡಿಸಿ ಬೇರೆ ಯಾವುದೇ ಹೆಸರನ್ನು ಇಡಲು ಅನುಮತಿ ನೀಡಿದರೆ ನಮ್ಮ ಸಂಘಟನೆ ನಗರಸಭೆ ಮುಂದೆ ಮತ್ತು ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಜಿಲ್ಲಾಧ್ಯಕ್ಷ ಎಸ್. ಮಲ್ಲಿಕಾರ್ಜುನ್, ಮಹಿಳಾ ಉಪಾಧ್ಯಕ್ಷೆ ಜಿ. ರಾಜೇಶ್ವರಿ, ಪ್ರಭಾಕರ್, ಲಕ್ಷ್ಮೀಪತಿ ಮುಂತಾದವರು ಎಚ್ಚರಿಸಿದ್ದಾರೆ.
ಅಪಘಾತದಲ್ಲಿ ಬಕ್ಕೇಶ್ ಸಾವು
ಶಿರಾ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4 ರ ಬೈಪಾಸ್ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಟಾಟಾ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿ ಉರುಳಿ ಒಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಸಾವನ್ನಪ್ಪಿದ ದುರ್ದೈವಿ ದಾವಣಗೆರೆಯ ಮಾಜಿ ಮೇಯರ್ ಬಕ್ಕೇಶ್ (50) ಎಂದು ಪೊಲೀಸರು ತಿಳಿಸಿದ್ದು ಮಲ್ಲೇಶ್, ಲಾರೆನ್ಸ್ ಎಂಬ ಇಬ್ಬರು ತೀವ್ರ ಗಾಯಗೊಂಡು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ತುಮಕೂರಿನ ತಮ್ಮ ಸ್ನೇಹಿತರ ಮನೆಗೆ ಭೇಟಿ ನೀಡಿ ದಾವಣಗೆರೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ನಗರ ಠಾಣಾಧಿಕಾರಿ ಪ್ರಹ್ಲಾದ್ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಪಟೇಲ್ ಮಹಲಿಂಗಪ್ಪ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ತಿಮ್ಮಾಲಾಪುರ ಗ್ರಾಮದ ಪಟೇಲ್ ಮಹಲಿಂಗಪ್ಪ (70) ಅವರು ಶನಿವಾರ ನಿಧನರಾದರು.
 ಪಟೇಲ್ ಮಹಲಿಂಗಪ್ಪನವರು ಉತ್ತಮ ಸಮಾಜ ಸೇವಕರು. ತಿಮ್ಮಲಾಪುರ ಹಾಲು ಉತ್ಪಾದಕ ಸಂಘದ ಅಧ್ಯಕ್ಷರೂ ಆಗಿದ್ದು ಪಟೇಲ್ ರಂಗೇಗೌಡ ಸ್ಮಾರಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪತ್ನಿ ಲಲಿತಮ್ಮ, ಮೂವರು ಗಂಡುಮಕ್ಕಳು, ಐವರು ಪುತ್ರಿಯರು ಇದ್ದಾರೆ. ನಿಧನಕ್ಕೆ ಮಾಜಿ ಶಾಸಕರಾದ ಟಿ.ಜಿ. ತಿಮ್ಮೇಗೌಡ, ಬಿ. ನಂಜಾಮರಿ, ಕೆಜೆಪಿ ಮುಖಂಡ ಲೋಕೇಶ್ವರ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಗಮೇಶ್, ಎಂ.ಆರ್. ನಿರಂಜನ್ ಮೂರ್ತಿ, ವಕೀಲ ಚನ್ನೇಗೌಡ, ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ, ನಗರಸಭಾ ಸದಸ್ಯ ನಿಜಗುಣ, ಚಂದ್ರಮ್ಮಷಡಕ್ಷರಯ್ಯ,  ಅನಿತಾ, ರೇಣುಕಯ್ಯ ಸುಮತಿ, ಡಾ.ಸ್ವಾಮಿ, ವಿನುತಾ ನವೀನ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement